ಬಿಜೆಪಿ ಸಂಸದ ರವಿ ಕಿಶನ್ಗೆ 3.25 ಕೋ.ರೂ. ವಂಚಿಸಿದ ಮುಂಬೈ ಮೂಲದ ಉದ್ಯಮಿ: ದೂರು ದಾಖಲು
Photo:PTI
ಗೋರಖ್ಪುರ: ರಾಜಕಾರಣಿ ಹಾಗೂ ನಟ ರವಿ ಕಿಶನ್ಗೆ BJP MP Ravi Kishan ಮುಂಬೈ ಮೂಲದ ಉದ್ಯಮಿಯೊಬ್ಬರು 3.25 ಕೋಟಿ ರೂ. ವಂಚಿಸಿದ್ದಾರೆ ಎಂದು ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.
ಆರೋಪಿ ಜೈನ್ ಜಿತೇಂದ್ರ ರಮೇಶ್ಗೆ 2012ರಲ್ಲಿ ರವಿ ಕಿಶನ್ ಹಣವನ್ನು ನೀಡಿದ್ದರು. ಅದನ್ನು ಹಿಂದಿರುಗಿಸುವಂತೆ ಒತ್ತಾಯಿಸಿದಾಗ ರಮೇಶ್ ಅವರಿಗೆ ತಲಾ 34 ಲಕ್ಷ ರೂ.ದ 12 ಚೆಕ್ಗಳನ್ನು ನೀಡಿದ್ದರು.
ಗೋರಖ್ಪುರದ ಲೋಕಸಭಾ ಸಂಸದರೂ ಆಗಿರುವ ನಟ ಕಿಶನ್ ಅವರು ಕಳೆದ ವರ್ಷ ಡಿಸೆಂಬರ್ 7 ರಂದು ಎಸ್ಬಿಐ ಶಾಖೆಯಲ್ಲಿ ಚೆಕ್ಗಳಲ್ಲಿ ಒಂದನ್ನು ಠೇವಣಿ ಮಾಡಿದ್ದರು ಆದರೆ ಅದು ಬೌನ್ಸ್ ಆಗಿದೆ.
ಹಣಕ್ಕಾಗಿ ರಮೇಶ್ ಜತೆ ಮಾತುಕತೆ ಮುಂದುವರಿಸಿದರೂ ಸಮಾಧಾನಕರ ಉತ್ತರ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಕಿಶನ್ ಅವರ ಪಿಆರ್ಒ ಪವನ್ ದುಬೆ ಮಂಗಳವಾರ ತಿಳಿಸಿದ್ದಾರೆ.
Next Story