ದಿಲ್ಲಿ ಅಬಕಾರಿ ನೀತಿ ಅನುಷ್ಠಾನದಲ್ಲಿ ಹಗರಣ: ಮದ್ಯ ಉದ್ಯಮಿ ಸಮೀರ್ ಮಹೇಂದ್ರುವನ್ನು ಬಂಧಿಸಿದ ಈಡಿ

Photo:PTI
ಹೊಸದಿಲ್ಲಿ: ಆಡಳಿತಾರೂಢ ಎಎಪಿ ಹಾಗೂ ಬಿಜೆಪಿ ನಡುವೆ ಭಾರೀ ಸಂಘರ್ಷ ಕಾರಣವಾಗಿರುವ ದಿಲ್ಲಿಯಲ್ಲಿ ಈಗ ಹಿಂತೆಗೆದುಕೊಳ್ಳಲಾಗಿರುವ ಅಬಕಾರಿ ನೀತಿ ಅನುಷ್ಟಾನ ಹಗರಣಕ್ಕೆ ಸಂಬಂಧಿಸಿದಂತೆ ಮದ್ಯದ ಉದ್ಯಮಿ ಸಮೀರ್ ಮಹೇಂದ್ರು ಅವರನ್ನು ಜಾರಿ ನಿರ್ದೇಶನಾಲಯವು(ಈಡಿ) ಬುಧವಾರ ಬಂಧಿಸಿದೆ.
ಎಎಪಿಯ ಸಂವಹನ ಮುಖ್ಯಸ್ಥ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ ವಿಜಯ್ ನಾಯರ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದ ಒಂದು ದಿನದ ನಂತರ ಮದ್ಯವನ್ನು ವಿತರಿಸುವ ಇಂಡೋಸ್ಪಿರಿಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರು ಅವರ ಬಂಧನವಾಗಿದೆ.
ಕಳೆದ ನವೆಂಬರ್ನಲ್ಲಿ ಆರಂಭವಾದ ಎಂಟು ತಿಂಗಳ ನಂತರ ಹಿಂತೆಗೆದುಕೊಳ್ಳಲಾದ ಅಬಕಾರಿ ನೀತಿಯು ಮದ್ಯದ ಕಾರ್ಟೆಲ್ಗಳಿಗೆ ಸಹಾಯ ಮಾಡಿದೆಯೇ ಎಂಬ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಮದ್ಯ ನೀತಿಯಿಂದಾಗಿ ಕೇಳಿಬಂದಿರುವ ಅಕ್ರಮ ಹಣ ವರ್ಗಾವಣೆ ಆರೋಪಗಳ ಬಗ್ಗೆ ಈಡಿ ತನಿಖೆ ನಡೆಸುತ್ತಿದೆ.
Next Story





