Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಲ ಹೊರುವ ಪದ್ಧತಿ: ಭಾರತದಲ್ಲಿ ಆಳವಾಗಿ...

ಮಲ ಹೊರುವ ಪದ್ಧತಿ: ಭಾರತದಲ್ಲಿ ಆಳವಾಗಿ ಬೇರು ಬಿಟ್ಟಿರುವ ಸಮಸ್ಯೆ

ಅರ್ಪಿತಾ ಪಾಲಿಯಅರ್ಪಿತಾ ಪಾಲಿಯ30 Sept 2022 10:21 AM IST
share
ಮಲ ಹೊರುವ ಪದ್ಧತಿ: ಭಾರತದಲ್ಲಿ ಆಳವಾಗಿ ಬೇರು ಬಿಟ್ಟಿರುವ ಸಮಸ್ಯೆ

ಮಲ ಹೊರುವ ಪದ್ಧತಿಯನ್ನು ಕಾನೂನು ನಿಷೇಧಿಸಿದೆ. ಆದರೆ, ಜಾತಿ ತಾರತಮ್ಯ ಮತ್ತು ಬಡತನವು ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದೆ. ನಮ್ಮ ಆರ್ಥಿಕತೆ ಬೆಳೆಯುತ್ತಿದೆ ಮತ್ತು ನಾವು ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದ್ದೇವೆ. ಆದರೆ, ಇಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದೆ. ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳು, ಭಾರತೀಯ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಭರವಸೆಯನ್ನು ನೀಡುತ್ತವೆ. ಈ ಭರವಸೆಗಳನ್ನು ಅತ್ಯಂತ ಸುಂದರವಾಗಿ ಬರೆಯಲಾಗಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ಆ ಮಾತುಗಳನ್ನು ಅದೇ ಶ್ರೇಷ್ಠತೆಯೊಂದಿಗೆ ಉಳಿಸಿಕೊಳ್ಳಲು ವಿಫಲವಾಗಿವೆ. 

ಜನರ ಮೂಲಭೂತ ಅವಶ್ಯಕತೆಗಳಲ್ಲಿ ಆಹಾರ, ಬಟ್ಟೆ ಮತ್ತು ಮನೆ ಮುಖ್ಯವಾದವುಗಳು. ಈ ಮೂರು ಮಾನವರ ಅಸ್ತಿತ್ವಕ್ಕೆ ಮತ್ತು ಬದುಕುಳಿಯಲು ಅಗತ್ಯವಾದವುಗಳು. ಆದರೆ, ಈಗ ಮಾನವರಿಗೆ ಬದುಕುಳಿಯುವುದಷ್ಟೇ ಮುಖ್ಯವಲ್ಲ. ಗೌರವಯುತ ಹಾಗೂ ಅರ್ಥಪೂರ್ಣವಾಗಿ ಬದುಕುವಲ್ಲಿ ಘನತೆ, ಆತ್ಮಗೌರವ, ಸ್ವಾತಂತ್ರ ಮತ್ತು ನ್ಯಾಯ ಮುಂತಾದ ಅಂಶಗಳೂ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ವಿವರಣೆಗಳ ಆಧಾರದಲ್ಲಿ ಹೇಳುವುದಾದರೆ, ಮಲ ಹೊರುವ ಕಾರ್ಮಿಕರು ತಮ್ಮ ಕೆಲಸಕ್ಕಾಗಿ ಪಡೆಯುವುದು ಜುಜುಬಿ ಮೊತ್ತದ ಹಣ. ಆದರೆ, ಅವರ ವಿರುದ್ಧ ಸಮಾಜ ಮಾಡುತ್ತಿರುವ ತಾರತಮ್ಯದಿಂದಾಗಿ ಅವರ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಈ ಆರ್ಥಿಕ, ಸಾಮಾಜಿಕ, ರಾಜಕೀಯ ತಾರತಮ್ಯಗಳ ಸಂಗಮವು ಅವರಿಗೆ ಉತ್ತಮ ಜೀವನ ಮಟ್ಟವನ್ನು ನಿರಾಕರಿಸಿರುವುದು ಮಾತ್ರವಲ್ಲ, ಅವರ ಮೂಲಭೂತ ಹಕ್ಕುಗಳು ಮತ್ತು ಮಾನವಹಕ್ಕುಗಳನ್ನೂ ಉಲ್ಲಂಘಿಸಿವೆ.

ಭಾರತದಲ್ಲಿ, ವ್ಯಕ್ತಿಯ ಕೆಲಸ ಮತ್ತು ಘನತೆಯನ್ನು ಜಾತಿ ನಿರ್ಧರಿಸುತ್ತದೆ. ಇಲ್ಲಿ ಜಾತಿಯು ಈ ಜಗತ್ತಿನಲ್ಲಿ ಮಗುವಿನ ಮೊದಲ ಕೂಗಿನೊಂದಿಗೇ ಅದನ್ನು ಆವರಿಸುತ್ತದೆ. ಇಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಹೊರದಬ್ಬಲ್ಪಟ್ಟ ಹಲವಾರು ಸಮುದಾಯಗಳಿವೆ. ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳು- ಆ ಸಮುದಾಯಗಳ ಪೈಕಿ ಕೆಲವು. ಈ ಪೈಕಿ ಕೆಲವು ಸಮುದಾಯಗಳನ್ನು ನಿರ್ದಿಷ್ಟ ಪ್ರದೇಶ ಮತ್ತು ವೃತ್ತಿಗೆ ಮಿತಿಗೊಳಿಸಲಾಗುತ್ತದೆ. ಉದಾಹರಣೆಗೆ; ಮಲ ಹೊರುವ ಕೆಲಸವನ್ನು ದಲಿತ ಸಮುದಾಯಕ್ಕೆ ನಿಗದಿಪಡಿಸಲಾಗಿದೆ.

ಮಲ ಹೊರುವವನ ಕೆಲಸವೆಂದರೆ, ಮಾನವ ಮಲವನ್ನು ಕೈಯಿಂದ ಸಾಗಿಸುವುದು. ಮಲ ಹೊರುವ ಪದ್ಧತಿಯು ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಆರಂಭಗೊಂಡಿತು. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಮುನ್ಸಿಪಾಲಿಟಿಗಳು ಸ್ಥಾಪನೆಯಾದವು. ಶೌಚಾಲಯಗಳಲ್ಲಿ ಮುಖ್ಯವಾಗಿ ಕಂಟೇನರ್‌ಗಳನ್ನು ಬಳಸಲಾಗುತ್ತಿತ್ತು. ಅವುಗಳನ್ನು ಪ್ರತೀ ದಿನ ಖಾಲಿ ಮಾಡಬೇಕಾಗುತ್ತಿತ್ತು. ಫ್ಲಶ್ ಶೌಚಾಲಯಗಳ ಶೋಧನೆಯ ಬಳಿಕ, ಈ ಪದ್ಧತಿಯು ಪಾಶ್ಚಿಮಾತ್ಯ ಜಗತ್ತಿನಲ್ಲಿ ಕಣ್ಮರೆಯಾಯಿತು. ಆದರೆ, ಭಾರತದಂಥ ಅಭಿವೃದ್ಧಿಶೀಲ ದೇಶಗಳಲ್ಲಿ ಅದು ಎಗ್ಗಿಲ್ಲದೆ ಮುಂದುವರಿದಿದೆ.

ಕಾನೂನು ಮತ್ತು ವಾಸ್ತವ

ಮಲ ಹೊರುವ ಪದ್ಧತಿಯನ್ನು ಕಾನೂನು ನಿಷೇಧಿಸಿದೆ. ಆದರೆ, ಜಾತಿ ತಾರತಮ್ಯ ಮತ್ತು ಬಡತನವು ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದೆ. ನಮ್ಮ ಆರ್ಥಿಕತೆ ಬೆಳೆಯುತ್ತಿದೆ ಮತ್ತು ನಾವು ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದ್ದೇವೆ. ಆದರೆ, ಇಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದೆ. ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳು, ಭಾರತೀಯ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಭರವಸೆಯನ್ನು ನೀಡುತ್ತವೆ. ಈ ಭರವಸೆಗಳನ್ನು ಅತ್ಯಂತ ಸುಂದರವಾಗಿ ಬರೆಯಲಾಗಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ಆ ಮಾತುಗಳನ್ನು ಅದೇ ಶ್ರೇಷ್ಠತೆಯೊಂದಿಗೆ ಉಳಿಸಿಕೊಳ್ಳಲು ವಿಫಲವಾಗಿವೆ. ಭಾರತ ಒಂದು ದೇಶವಾಗಿ ತಂತ್ರಜ್ಞಾನ, ಆರ್ಥಿಕತೆ, ಸಮಾಜ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ. ಆದರೆ, ಮಲ ಹೊರುವ ಪದ್ಧತಿ ಮುಂತಾದ ವ್ಯಕ್ತಿಯ ಜೀವಕ್ಕೆ ಗಂಭೀರ ಬೆದರಿಕೆಯೊಡ್ಡುವ ಪದ್ಧತಿಗಳನ್ನು ಇನ್ನೂ ಮುಂದುವರಿಸಿಕೊಂಡು ಬಂದಿದೆ.

ಮಲ ಹೊರುವವರಿಗೆ ಉದ್ಯೋಗ ಮತ್ತು ಒಣ ಶೌಚಾಲಯಗಳ ನಿರ್ಮಾಣ ಕಾಯ್ದೆ (1993)ಯ ಅಡಿಯಲ್ಲಿ ಭಾರತದಲ್ಲಿ ಮಲ ಹೊರುವ ಪದ್ಧತಿಯನ್ನು ನಿಷೇಧಿಸಲಾಗಿದೆ. ಶುಚಿತ್ವವಿಲ್ಲದ ಶೌಚಾಲಯಗಳನ್ನು ನಿರ್ಮಿಸುವಂತಿಲ್ಲ ಹಾಗೂ ರಕ್ಷಣಾ ಪರಿಕರಗಳಿಲ್ಲದೆ ಚರಂಡಿಗಳನ್ನು ಮಾನವರು ಕೈಯಿಂದ ಶುಚಿ ಮಾಡುವಂತಿಲ್ಲ. ಅದೇ ವರ್ಷ, ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸಲಾಯಿತು. ಮಲ ಹೊರುವ ಪದ್ಧತಿಯ ನಿಷೇಧಕ್ಕೆ ಸಂಬಂಧಿಸಿದ ಎಲ್ಲಾ ಸಂಗತಿಗಳ ಸಮನ್ವಯಕ್ಕಾಗಿ ಈ ಆಯೋಗವನ್ನು ರಚಿಸಲಾಯಿತು. ಇದಕ್ಕೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಅಧ್ಯಯನ ಮಾಡಿ ಶಿಫಾರಸುಗಳನ್ನು ಮಾಡುವುದೂ ಅದರ ಒಂದು ಉದ್ದೇಶವಾಗಿತ್ತು.

ಇನ್ನೊಂದು ಕಾಯ್ದೆ

2013ರಲ್ಲಿ, ಮಲಹೊರುವ ಉದ್ಯೋಗ ನಿಷೇಧ ಮತ್ತು ಮಲಹೊರುವವರ ಪುನರ್ವಸತಿ ಕಾಯ್ದೆಯನ್ನು ಅಂಗೀಕರಿಸಲಾಯಿತು. ಈ ಕಾಯ್ದೆ ಜಾರಿಗೊಂಡ ಮೂರು ವರ್ಷಗಳಲ್ಲಿ ಮುನ್ಸಿಪಾಲಿಟಿಗಳು, ಕಂಟೋನ್ಮೆಂಟ್ ಬೋರ್ಡ್‌ಗಳು ಮತ್ತು ರೈಲ್ವೆ ಆಡಳಿತಗಳು ಸಾಕಷ್ಟು ಸಂಖ್ಯೆಯಲ್ಲಿ ಶುಚಿಯಾದ ಸಮುದಾಯ ಶೌಚಾಲಯಗಳನ್ನು ನಿರ್ಮಿಸುವುದನ್ನು ಕಾಯ್ದೆಯು ಕಡ್ಡಾಯಗೊಳಿಸಿತು. ದಂಡ ವಿಧಿಸುವ ಕಲ್ಪನೆಯನ್ನೂ ಕಾಯ್ದೆಯು ಪರಿಚಯಿಸಿತು. ಓರ್ವ ವ್ಯಕ್ತಿಯು ಶೌಚಾಲಯಗಳನ್ನು ಶುಚಿಗೊಳಿಸಲು ಮಲಹೊರುವ ಕಾರ್ಮಿಕರನ್ನು ನಿಯೋಜಿಸಿದರೆ ಅಥವಾ ಶುಚಿಯಿಲ್ಲದ ಶೌಚಾಲಯಗಳನ್ನು ನಿರ್ಮಿಸಿದರೆ, 50,000 ರೂ.ವರೆಗೆ ದಂಡ ಪಾವತಿಸಬೇಕು ಅಥವಾ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸಬೇಕು ಅಥವಾ ಎರಡನ್ನೂ ನಿರ್ವಹಿಸಬೇಕು. ಈ ಕಾಯ್ದೆಯು ಮಲ ಹೊರುವ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸುವ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಅಪಾಯಕಾರಿಯಾಗಿ ಶುಚಿ ಮಾಡುವ ಕೆಲಸಕ್ಕಾಗಿ ರಕ್ಷಣಾ ಪರಿಕರಗಳಿಲ್ಲದೆ ಜನರನ್ನು ನಿಯೋಜಿಸುವ ಸ್ಥಳೀಯ ಪ್ರಾಧಿಕಾರಗಳು ಅಥವಾ ಇತರ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಇಲ್ಲಿ ದಂಡದ ಪ್ರಮಾಣ 2 ಲಕ್ಷ ರೂಪಾಯಿವರೆಗೆ ಮತ್ತು ಜೈಲು ಶಿಕ್ಷೆ 2 ವರ್ಷಗಳವರೆಗೆ; ಅಥವಾ ಎರಡನ್ನೂ ವಿಧಿಸಬಹುದಾಗಿದೆ.

‘‘20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, 1993 ಮತ್ತು 2019 ಜುಲೈ ನಡುವಿನ ಅವಧಿಯಲ್ಲಿ, ಚರಂಡಿಗಳು ಮತ್ತು ಶೌಚಗುಂಡಿಗಳನ್ನು ಶುಚಿ ಮಾಡುವ ಕೆಲಸದಲ್ಲಿ ತೊಡಗಿರುವ ವೇಳೆ 814 ಮಲ ಹೊರುವ ಕಾರ್ಮಿಕರು ಮೃತಪಟ್ಟಿರುವುದು ದಾಖಲಾಗಿದೆ’’ ಎಂದು 2019ರಲ್ಲಿ ‘ದ ಹಿಂದೂ’ ಪತ್ರಿಕೆ ವರದಿ ಮಾಡಿದೆ. ಈ 20 ರಾಜ್ಯಗಳ ಪೈಕಿ, ಕೇವಲ 11 ರಾಜ್ಯಗಳು ಮೃತರ ಕುಟುಂಬಿಕರಿಗೆ ನೀಡಿರುವ ಪರಿಹಾರದ ವಿವರಗಳು ಲಭ್ಯವಾಗಿವೆ ಎಂದೂ ಅದು ಹೇಳಿದೆ.

ಶಿಫಾರಸುಗಳು

ಜಗತ್ತು ವೇಗವಾಗಿ ಬದಲಾಗುವ ಹಂತದಲ್ಲಿರುವಾಗ, ಇಂಥ ಅಮಾನವೀಯ ಪದ್ಧತಿಗಳನ್ನು ಕೊನೆಗೊಳಿಸಿ, ನಮ್ಮ ಸಂವಿಧಾನ ನಿರ್ಮಾತೃಗಳ ಆಶಯಗಳನ್ನು ಎತ್ತಿಹಿಡಿಯುವ ಅಗತ್ಯವಿದೆ. ಸಂವಿಧಾನದಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳು ಮತ್ತು ವ್ಯಕ್ತಿಗಳನ್ನು ರಕ್ಷಿಸಲು ರೂಪಿಸಲಾಗಿರುವ ಕಾನೂನು ಕ್ರಮಗಳನ್ನು ಜಾರಿಗೊಳಿಸುವುದು ಅಸಾಧ್ಯವಾದರೆ, ಆ ಹಕ್ಕುಗಳು ಮತ್ತು ರಕ್ಷಣೆಗಳು ಇದ್ದರೂ ಇಲ್ಲದಂತೆ. ಇತ್ತೀಚಿನ ದಿನಗಳಲ್ಲಿ, ವಿವಿಧ ಸಚಿವಾಲಯಗಳು ಮಲ ಹೊರುವ ಕಾರ್ಮಿಕರು ಇಂಥ ನರಕದಿಂದ ಹೊರ ಬರಲು ಸಹಾಯವಾಗುವಂತೆ ಹಲವು ಕ್ರಮಗಳನ್ನು ತೆಗೆದುಕೊಂಡಿವೆ. ಇಂಥ ಕ್ರಮಗಳಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2020-21ರ ಸಾಲಿಗಾಗಿ ಸಿದ್ಧಪಡಿಸಿರುವ ‘ಕ್ರಿಯಾ ಯೋಜನೆ’ಯೊಂದು ಮುಖ್ಯವಾಗಿದೆ. ಸಂತ್ರಸ್ತರಿಗಾಗಿ ಸ್ವ ಉದ್ಯೋಗ ಯೋಜನೆಗಳ ಬಂಡವಾಳದಲ್ಲಿ ಸಬ್ಸಿಡಿ ನೀಡುವುದು, ಕೌಶಲ ಅಭಿವೃದ್ಧಿ ತರಬೇತಿ ನೀಡುವುದು, ಆರೋಗ್ಯ-ಜಾಗೃತಿ ಶಿಬಿರಗಳನ್ನು ಆಯೋಜಿಸುವುದು- ಈ ಕ್ರಿಯಾ ಯೋಜನೆಯ ಪ್ರಮುಖ ಅಂಶಗಳಾಗಿವೆ.

ಇಂಥ ಕ್ರಮಗಳ ಹೊರತಾಗಿಯೂ, ಮಲ ಹೊರುವಂಥ ಪದ್ಧತಿಗಳು ಈಗಲೂ ವ್ಯಾಪಕವಾಗಿ ಚಾಲ್ತಿಯಲ್ಲಿದೆ. ಅದರಲ್ಲಿ ತೊಡಗಿರುವ ಜನರು ಎಲ್ಲ ರೀತಿಯ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ಅವರ ಮೇಲೆ ನಡೆಯುವ ಇಂಥ ದೌರ್ಜನ್ಯಗಳನ್ನು ತಡೆಯಲು ಈಗ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

                                                                                                                                                                              ಕೃಪೆ: countercurrents.org

share
ಅರ್ಪಿತಾ ಪಾಲಿಯ
ಅರ್ಪಿತಾ ಪಾಲಿಯ
Next Story
X