ಎಲ್ಲಿಯಾದರೂ SDPI ಕಚೇರಿ ಸೀಲ್ ಮಾಡಿದ್ದರೆ ನನಗೆ ಮಾಹಿತಿ ನೀಡಿ: ಎಡಿಜಿಪಿ ಅಲೋಕ್ ಕುಮಾರ್
ಬೆಂಗಳೂರು: ನಿಷೇಧಿತ ಸಂಘಟನೆ ಪಿಎಫ್ಐ ಕಚೇರಿಗಳಿಗೆ ಪೊಲೀಸರು ದಾಳಿ ನಡೆಸಿ, ಹಲವು ಕಚೇರಿಗಳನ್ನು ಸೀಲ್ ಮಾಡಿದ್ದಾರೆ. ಪೊಲೀಸರು ಎಸ್ಡಿಪಿಐ (SDPI ) ಕಚೇರಿಗಳನ್ನು ಸೀಲ್ ಮಾಡಿಲ್ಲ. ಪಿಎಫ್ಐ ಬಳಕೆ ಮಾಡುತ್ತಿದ್ದ ಎಸ್ಡಿಪಿಐ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ' ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಟ್ವೀಟ್ ಮಾಡಿರುವ ಅವರು, 'ಒಂದು ವೇಳೆ ಎಸ್ಡಿಪಿಐ ಕಚೇರಿಗಳು ಸೀಲ್ ಆಗಿದ್ದರೆ, ಅಂತಹ ಸ್ಥಳಗಳ ಬಗ್ಗೆ ನನಗೆ ಮಾಹಿತಿ ನೀಡಿ' ಎಂದು ಕೇಳಿದ್ದಾರೆ.
ಪಿಎಫ್ ಐ ಕಚೇರಿಗಳ ಜೊತೆಗೆ ಎಸ್ ಡಿಪಿ ಕಚೇರಿಗಳಿಗೂ ಬೀಗಮುದ್ರೆ ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
Plz let me know the places where SDPI offices have been sealed , if there any
— alok kumar (@alokkumar6994) September 29, 2022
Only the places where PFI was using SDPI offices, the places have been searched.
For sealing purposes due process of law has been followed.
Plz check and let me know.
Will ensure fairness.