ಫಹದ್ ಫಾಸಿಲ್ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಪವನ್ ಕುಮಾರ್
ಹೊಂಬಾಳೆ ಫಿಲಂಸ್ ಬ್ಯಾನರ್ನಡಿಯಲ್ಲಿ 'ಧೂಮಂ' ಚಿತ್ರ ಘೋಷಣೆ
ಬೆಂಗಳೂರು: 'ಯು-ಟರ್ನ್' ಖ್ಯಾತಿಯ ಚಿತ್ರ ನಿರ್ದೇಶಕ ಪವನ್ ಕುಮಾರ್ ಅವರು ಬಹುಭಾಷಾ ಮಲಯಾಳಂ ನಟ ಫಹದ್ ಫಾಸಿಲ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸೂರರೈಪೊಟ್ರು ಚಿತ್ರದ ನಟಿ ಅಪರ್ಣಾ ಬಾಲಮುರಳಿ ಕೂಡಾ ಈ ಚಿತ್ರದಲ್ಲಿ ಮುಖ್ಯಪಾತ್ರ ನಿರ್ವಹಿಸಲಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯಯ್ ಕಿರಗಂದೂರ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ.
'ಧೂಮಂ' ಶೀರ್ಷಿಕೆಯ ಬಹುಭಾಷಾ ಚಿತ್ರದ ಕಥೆಯನ್ನು ಪವನ್ ಕುಮಾರ್ ಬರೆದಿದ್ದು ಅವರೇ ನಿರ್ದೇಶಿಸಲಿದ್ದಾರೆ. ಅಕ್ಟೋಬರ್ 9 ರಂದು ಚಿತ್ರದ ನಿರ್ಮಾಣ ಆರಂಭವಾಗಲಿದ್ದು, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರೊಡಕ್ಷನ್ ಬ್ಯಾನರ್ ತಿಳಿಸಿದೆ.
2016 ರಲ್ಲಿ 'ಮಹೇಶಿಂಟೆ ಪ್ರತೀಕಾರಂ' ಚಿತ್ರದ ಬಳಿಕ ಈ ಇತ್ರದ ಮೂಲಕ ಫಹದ್ ಹಾಗೂ ಅಪರ್ಣಾ ಒಟ್ಟಿಗೆ ಕೆಲಸ ಮಾಡಲಿದ್ದಾರೆ.
ಇತ್ತೀಚೆಗಷ್ಟೇ ಸುಧಾ ಕೊಂಗರ ಅವರ 'ಸೂರರೈ ಪೊಟ್ರು' ಚಿತ್ರದಲ್ಲಿನ ನಟನೆಗಾಗಿ ಅಪರ್ಣಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.
.
— Hombale Films (@hombalefilms) September 30, 2022
Presenting #Dhoomam.
Kickstarting from Oct 9, 2022, End Game begins in Summer 2023.@twitfahadh #Pawan @VKiragandur @aparnabala2@hombalefilms @HombaleGroup @vjsub @Poornac38242912 #PreethaJayaraman @roshanmathew22 pic.twitter.com/5x9zXJsznj