ಕರಾವಳಿಯಲ್ಲಿ ಶನಿವಾರವೂ ಮಳೆ ಸಾಧ್ಯತೆ
ಸಾಂದರ್ಭಿಕ ಚಿತ್ರ
ಉಡುಪಿ: ಸುಮಾರು ಒಂದು ವಾರದ ಬಳಿಕ ಶುಕ್ರವಾರ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಾದ್ಯಂತ ಬೆಳಗ್ಗೆ ಹಾಗೂ ಸಂಜೆಯ ವೇಳೆ ಮಳೆ ಸುರಿದಿದೆ.
ಕರಾವಳಿಯಾದ್ಯಂತ ನಾಳೆ ಸಹ ಸಾಧಾರಣದಿಂದ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರ ತಿಳಿಸಿದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ 64.5ಮಿ.ಮೀ.ನಿಂದ 115.5 ಮಿ.ಮೀ. ಮಳೆ ಬೀಳಬಹುದು ಎಂದು ಕೇಂದ್ರದ ಹವಾಮಾನ ವರದಿ ತಿಳಿಸಿದೆ.
Next Story