ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ ಕಡಿತ
ಹೊಸದಿಲ್ಲಿ,ಅ.1: ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ಶನಿವಾರ ತಗ್ಗಿಸಿದ್ದು,ಇದು ತಕ್ಷಣದಿಂದಲೇ ಜಾರಿಗೊಂಡಿದೆ. ದಿಲ್ಲಿಯಲ್ಲಿ ದರವನ್ನು 25.50 ರೂ.ಗಳಷ್ಟು ಕಡಿತಗೊಳಿಸಲಾಗಿದ್ದು,19 ಕೆ.ಜಿ.ಯ ವಾಣಿಜ್ಯ ಬಳಕೆ ಸಿಲಿಂಡರ್ಗೆ ಈಗ 1,885 ರೂ.ಬದಲು 1,859.50 ರೂ.ಪಾವತಿಸಬೇಕಾಗುತ್ತದೆ.
ಕೋಲ್ಕತಾದಲ್ಲಿ ಈಗ ದರ 1,959 ರೂ. ಮತ್ತು ಮುಂಬೈನಲ್ಲಿ 1,811.50 ರೂ.ಗೆ ಇಳಿದಿವೆ. ಸೆ.1ರಂದು ವಾಣಿಜ್ಯ ಬಳಕೆ ಸಿಲಿಂಡರ್ನ ದರವನ್ನು 91.50 ರೂ.ಗಳಷ್ಟು ಕಡಿತಗೊಳಿಸಲಾಗಿತ್ತು. ಅದಕ್ಕೂ ಮುನ್ನ ಆ.1ರಂದು 36 ರೂ. ಮತ್ತು ಜು.6ರಂದು 8.5 ರೂ.ತಗ್ಗಿಸಲಾಗಿತ್ತು.ಆದರೆ ಶನಿವಾರ ಗೃಹಬಳಕೆ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಬದಲಾವಣೆಯನ್ನು ಮಾಡಲಾಗಿಲ್ಲ.
Next Story