ದ.ಕ.ಜಿಲ್ಲಾ ಯುವ ಜನತಾ ದಳದ ಪದಾಧಿಕಾರಿಗಳ ಸಭೆ

ಮಂಗಳೂರು, ಅ.1: ದ.ಕ.ಜಿಲ್ಲಾ ಯುವ ಜಾತ್ಯತೀತ ಜನತಾದಳದ ಪಧಾದಿಕಾರಿಗಳ ಸಭೆಯು ನಗರದ ಪಕ್ಷದ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣರ ಮಾತನಾಡಿ ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸಂಘಟನೆಗೆ ಯುವಕರು ಶ್ರಮಿಸಬೇಕು. ರಾಜ್ಯ ಮತ್ತು ಕೇಂದ್ರ ಸರಕಾರದ ದುರಾಡಳಿತ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿತೇಶ್ ರೈ, ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಸತ್ತಾರ್ ಬಂದರ್, ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಿವ ಸಾಲ್ಯಾನ್, ಪಧಾದಿಕಾರಿಗಳಾದ ನಿತೇಶ್ ಪೂಜಾರಿ, ವಿನಯ್, ಗೌತಮ್, ಖೊಲಿನ್ ವಾಜ್, ಪ್ರಣಮ್, ವಿನಿತ್, ರಿನಿತ್, ನಿಶಾಂತ್, ಪ್ರದೀಪ್, ದೀಪಕ್ ಉಪಸ್ಥಿತರಿದ್ದರು.
ಜಿಲ್ಲಾ ಯುವ ಮಹಾಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಚಿಮ್ಟಿಕಲ್ಲು ಸ್ವಾಗತಿಸಿದರು. ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ಹಾಗು ಜಿಲ್ಲಾ ಸಂಘಟನಾ ಉಸ್ತುವಾರಿ ರತೀಶ್ ಕರ್ಕೆರ ವಂದಿಸಿದರು..
Next Story





