ನಾಳೆಯಿಂದ 'ಜನ್ ಸೂರಜ್' ಪಾದಯಾತ್ರೆ ಆರಂಭಿಸಲಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್

ಪಾಟ್ನಾ: ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ತಮ್ಮ 'ಜನ್ ಸೂರಜ್' ಅಭಿಯಾನದ ಭಾಗವಾಗಿ ರವಿವಾರ ಗಾಂಧಿ ಜಯಂತಿಯಂದು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಿಂದ 'ಪಾದಯಾತ್ರೆ' ಆರಂಭಿಸಲಿದ್ದಾರೆ.
ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಿಂದ ಆರಂಭವಾಗಲಿರುವ ಈ ಪಾದಯಾತ್ರೆ 3,500 ಕಿಲೋಮೀಟರ್ ಕ್ರಮಿಸಲಿದೆ. ಜನ್ ಸೂರಜ್ ಎಂದು ಹೆಸರಿಸಲಾಗಿರುವ ಈ ಯಾತ್ರೆಯಲ್ಲಿ ಪ್ರಶಾಂತ್ ಕಿಶೋರ್ ಅವರು ಸಮಾಜದ ಹಲವು ಕ್ಷೇತ್ರಗಳ ಜನರನ್ನು ಭೇಟಿಯಾಗಲಿದ್ದಾರೆ. ಈ ಯಾತ್ರೆಯನ್ನು 12 ರಿಂದ 18 ತಿಂಗಳವರೆಗೆ ಯೋಜಿಸಲಾಗಿದೆ ಎಂದು ವರದಿಯಾಗಿದೆ.
ರಾಹುಲ್ ಗಾಂಧಿ ಭಾರತೀಯ ಏಕತಾ ಯಾತ್ರೆ ಎಂಬ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವಾಗಲೇ ಪ್ರಶಾಂತ್ ಕಿಶೋರ್ ಜನ್ ಸೂರಜ್ ಎಂಬ ಪಾದಯಾತ್ರೆ ನಡೆಸಲು ಮುಂದಾಗಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
Next Story





