ಮೂಳೂರು: ಕಡಲತೀರದಲ್ಲಿ ʼತೊರಕೆʼ ಮೀನು ಸುಗ್ಗಿ
ಕಾಪು : ಕಾಪು ಸಮೀಪದ ಮೂಳೂರು ಕಡಲ ತೀರದಲ್ಲಿ ಶನಿವಾರ ಮೀನುಗಾರಿಕೆ ನಡೆಸುತಿದ್ದ ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದಿವೆ.
ಶುಕ್ರವಾರ ಹಾಗೂ ಶನಿವಾರ ಮೂಳೂರು ಕಡಲ ತೀರದಲ್ಲಿ ಏರ್ಮಾಳಿನ ಕೈರಂಪಣಿ ಮೀನುಗಾರಿಕೆ ಸಂದರ್ಭ ಬೃಹತ್ ಗಾತ್ರದ ತೊರಕೆ ಮೀನುಗಳು ಬಲೆಗೆ ಬಿದ್ದಿವೆ. ತಲಾ 15 ರಿಂದ 50 ಕಿಲೋ ತೂಕದ ನೂರಾರು ತೊರಕೆ ಮೀನುಗಳು ಬಲೆಗೆ ಬಿದ್ದಿದ್ದು, ಈ ತೋರಕೆ ಮೀನುಗಳು ಕಿಲೋವೊಂದಕ್ಕೆ 250 ರೂ ನಿಂದ 300 ರೂ ಬೆಲೆ ಬಾಳುತ್ತದೆ.
ತೊರಕೆ ಎಂದು ಕರೆಯಲ್ಪಡುವ ಈ ಮೀನುಗಳನ್ನು ನೋಡಲೆಂದೇ ನೂರಾರು ಮಂದಿ ಕಡಲತೀರದತ್ತ ದೌಡಾಯಿಸಿದ್ದಾರೆ. ಬಲೆಗೆ ಬಿದ್ದ ಮೀನುಗಳನ್ನು ದೊಡ್ಡ ಬಡಿಗೆಯಲ್ಲಿ ಮೀನನ್ನು ಕಟ್ಟಿ ಹರಸಾಹಸದ ಮೂಲಕ ಮೇಲಕೆತ್ತಬೇಕಾಯಿತು.
Next Story