'ನನಗಿಂತಲೂ ವಿನಮ್ರನಾಗಿ ಕಾಣಿಸಿಕೊಳ್ಳಲು ಬಯಸಿದ್ದಾರೆ': ಜನರ ಮುಂದೆ ಮಂಡಿಯೂರಿದ ಪ್ರಧಾನಿ ಕುರಿತು ಗೆಹ್ಲೋಟ್ ಟೀಕೆ

ಸಿರೋಹಿ ಜಿಲ್ಲೆಯಲ್ಲಿ ಜನರ ಎದುರು ಮಂಡಿಯೂರಿ ಕುಳಿತ ಪ್ರಧಾನಿ ಮೋದಿ, photo:twitter
ಜೈಪುರ: ಸಿರೋಹಿಯಲ್ಲಿ ಜನರ ಮುಂದೆ ಮಂಡಿಯೂರಿ ಕುಳಿತಿದ್ದ ನರೇಂದ್ರ ಮೋದಿಯವರನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ Rajasthan Chief Minister Ashok Gehlot ಶನಿವಾರ ತರಾಟೆಗೆ ತೆಗೆದುಕೊಂಡಿದ್ದು, ಪ್ರಧಾನಿ ಅವರು ನನಗಿಂತ ವಿನಮ್ರರಾಗಿ ಕಾಣಿಸಿಕೊಳ್ಳಲು ಬಯಸಿದ್ದಾರೆ ಎಂದು ಹೇಳಿದ್ದಾರೆ.
ಇಂತಹ ಹಳೆಯ ವರ್ತನೆಯನ್ನು ಪ್ರದರ್ಶಿಸುವ ಬದಲು ಮೋದಿಯವರು ದೇಶದ ಜನತೆಗೆ ಸಹೋದರತೆ ಹಾಗೂ ಪ್ರೀತಿಯ ಸಂದೇಶವನ್ನು ನೀಡಬೇಕು ಎಂದು ಗೆಹ್ಲೋಟ್ ಹೇಳಿದ್ದಾರೆ.
ಶುಕ್ರವಾರ ತಡರಾತ್ರಿ ಸಿರೋಹಿ ಜಿಲ್ಲೆಯ ಅಬು ರೋಡ್ಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿಲ್ಲ. ಏಕೆಂದರೆ ಅವರು ತಡವಾಗಿ ಸ್ಥಳಕ್ಕೆ ತಲುಪಿದ್ದರು ಮತ್ತು ತಾನು ಧ್ವನಿವರ್ಧಕ ನಿಯಮಗಳನ್ನು ಪಾಲಿಸುತ್ತೇನೆಂದು ಹೇಳಿದರು. ಆದಾಗ್ಯೂ, ಅವರು ಸಭೆಯ ಎದುರು ಮೂರು ಬಾರಿ ಮಂಡಿಯೂರಿ ಕುಳಿತು ಜನರನ್ನು ಉದ್ದೇಶಿಸಿ ಮಾತನಾಡಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸಿದರು.
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರು ಅತ್ಯಂತ ವಿನಮ್ರ ವ್ಯಕ್ತಿ... ಸರಳ ವ್ಯಕ್ತಿ ಎಂದು ಅವರಿಗೆ (ಮೋದಿ) ತಿಳಿದಿದೆ. ನಾನು ಬಾಲ್ಯದಿಂದಲೂ ಸರಳಗೆ ಮೈಗೂಡಿಸಿಕೊಂಡಿರುವೆ. ಮೋದಿಜಿ ನನಗೆ ಸ್ಪರ್ಧೆ ನೀಡಲು ನನಗಿಂತ ವಿನಯವಂತರಾಗಿ ಕಾಣಿಸಿಕೊಳ್ಳಲು ಬಯಸಿದ್ದಾರೆ’’ ಎಂದು ಹೇಳಿದ ಗೆಹ್ಲೋಟ್, ಪ್ರಧಾನಿಯು ವಿನಮ್ರತೆಯ ಜೊತೆಗೆ ದೇಶವಾಸಿಗಳಿಗೆ ಸಹೋದರತೆ ಮತ್ತು ಪ್ರೀತಿಯ ಸಂದೇಶವನ್ನು ನೀಡಬೇಕು ಎಂದು ಹೇಳಿದರು.
ಸೌಹಾರ್ದತೆ ಸಾರಲು ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿದ್ದರೆ ನಾನು ಅವರಿಗೆ ಕರೆ ಮಾಡಿ ಅಭಿನಂದಿಸುತ್ತಿದ್ದೆ. ಅವರು "ಕೇವಲ ಮಂಡಿಯೂರಿದ್ದೇಕೆ? ನಾನು ಕೂಡ ಅಶೋಕ್ ಗೆಹ್ಲೋಟ್ ಅವರಂತೆ ವಿನಮ್ರ ಎಂದು ತಿಳಿಸಲೋ?" ಅವರು ಗೆಹ್ಲೋಟ್ ಪ್ರಶ್ನಿಸಿದರು.







