ಮೈಸೂರು: ಸುರಿಯುತ್ತಿದ್ದ ಮಳೆಯಲ್ಲೇ ರಾಹುಲ್ ಗಾಂಧಿ ಭಾಷಣ

ಮೈಸೂರು: ಸುರಿಯುತ್ತಿದ್ದ ಮಳೆಯಲ್ಲೇ ನೆನೆದುಕೊಂಡೇ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮೈಸೂರು ತಾಲ್ಲೂಕು ಕಡಕೊಳದಿಂದ ಪಾದಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ ಮೈಸೂರು ನಗರ ತಲುಪುತ್ತಿದ್ದಂತೆ ಮಳೆ ಪ್ರಾರಂಭವಾಯಿತು. ದೊಡ್ಡಕೆರೆ ಮೈದಾನದಲ್ಲಿ ಹಾಕಲಾಗಿದ್ದ ಓಪನ್ ವೇದಿಕೆಯಲ್ಲೇ ಸುರಿಯುತ್ತಿದ್ದ ಬಾರಿ ಮಳೆಯಲ್ಲೇ ನೆನೆದುಕೊಂಡೇ ಬಾಷಣ ಮಾಡಿದರು.
ಬಳಿಕ ರಾಹುಲ್ ಗಾಂಧಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ನಾಯಕರುಗಳು ಪರಸ್ಪರ ಕೈ ಹಿಡಿದುಕೊಂಡು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು.

Next Story





