ಬೆಂಗಳೂರು | ಚೀನಾ ಆ್ಯಪ್‍ಗಳಿಂದ ವಂಚನೆ ಪ್ರಕರಣ: ಈ.ಡಿ.ಯಿಂದ 5.85 ಕೋಟಿ ರೂ.ಜಪ್ತಿ

ಬೆಂಗಳೂರು, ಅ.3: ಚೀನ ಆ್ಯಪ್‍ಗಳಿಂದ ವಂಚನೆ ಪ್ರಕರಣ ಸಂಬಂಧ ಬೆಂಗಳೂರಿನ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದ ಈಡಿ ಅಧಿಕಾರಿಗಳು 5.85 ಕೋಟಿ ರೂ. ಜಪ್ತಿ ಮಾಡಿದ್ದಾರೆ.
ಚೀನ ಮೂಲದ ವ್ಯಕ್ತಿಗಳು ಕೀಪ್ ಶೇರರ್ ಎಂಬ ಕಂಪೆನಿ ಆರಂಭಿಸಿ ನಿರುದ್ಯೋಗಿ ಯುವಕರಿಗೆ ಕೆಲಸ ಕೊಡುವುದಾಗಿ ಆಮಿಷವನ್ನು ಒಡ್ಡಲಾಗಿತ್ತು. ನೂರಾರು ಯುವಕರು ಕೆಲಸದ ಆಸೆಗೆ ನೋಂದಣಿ ಮಾಡಿದ್ದರು. ಆದರೆ, ಇದಕ್ಕೂ ಮುನ್ನ ಹಣ ಪಾವತಿಸಲು ಸೂಚಿಸಲಾಗಿತ್ತು.
ತದನಂತರ, ಭಾರತೀಯರನ್ನೆ ಭಾಷಾಂತರ ಮಾಡಲು, ಎಚ್‍ಆರ್ ನಿರ್ದೇಶಕರಾಗಿ ನೇಮಿಸಿತ್ತು. ನೇಮಕವಾದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪಡೆದು ಬ್ಯಾಂಕ್ ಖಾತೆಗಳನ್ನು ತೆರೆದು ವಂಚನೆ ಮಾಡಲಾಗಿತ್ತು.
ಈ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಈಡಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದರು.
Next Story





