ವಿಜಯಪುರ: ಕೆಎಸ್ಸಾರ್ಟಿಸಿ ನೌಕರ ಆತ್ಮಹತ್ಯೆ
ಗಂಗಾಧರ ಕೃಷ್ಣಪ್ಪ ಬಡಿಗೇರ - ಆತ್ಮಹತ್ಯೆ ಮಾಡಿಕೊಂಡ ಕೆಎಸ್ಸಾರ್ಟಿಸಿ ನೌಕರ
ವಿಜಯಪುರ: ಕೆಎಸ್ಸಾರ್ಟಿಸಿ ನೌಕರನೋರ್ವ ಕಾಲುವೆಗೆ ಹಾರಿ, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ನಡೆದಿದೆ.
ಗಂಗಾಧರ ಕೃಷ್ಣಪ್ಪ ಬಡಿಗೇರ ಆತ್ಮಹತ್ಯೆ ಮಾಡಿಕೊಂಡ ಕೆಎಸ್ಸಾರ್ಟಿಸಿ ನೌಕರ ಎಂದು ತಿಳಿದು ಬಂದಿದೆ.
ಕೌಟುಂಬಿಕ ಕಲಹದಿಂದ ಮನನೊಂದು ಭೈರವಡಗಿ ಗ್ರಾಮದ ಹತ್ತಿರ ಚಿಮ್ಮಲಗಿ ಏತ ನೀರಾವರಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story