ಸೋನಿಯಾ ಗಾಂಧಿ ಕರ್ನಾಟಕಕ್ಕೆ ಬಂದಿದ್ದು ಸಿದ್ದರಾಮಯ್ಯ- ಡಿಕೆಶಿಯನ್ನು ಜೋಡಿಸಲು: ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಸೋಮವಾರ ಮೈಸೂರಿಗೆ ಆಗಮಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಒಂದುಗೂಡಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳವಾರ ಟ್ವೀಟ್ ಮಾಡಿರುವ ಅವರು, ''ಮಗನ ರಾಜಕೀಯ ಭವಿಷ್ಯಕ್ಕಾಗಿ ಎರಡು ದಿನದ ಮಟ್ಟಿಗೆ ಕರ್ನಾಟಕಕ್ಕೆ ಆಗಮಿಸಿರುವ ಸೋನಿಯಾ ಗಾಂಧಿಯವರಿಗೆ ಸಿಎಂ ಕುರ್ಚಿಯ ಭ್ರಮೆಯಲ್ಲಿ ಕಾದಾಡುತ್ತಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಒಂದುಗೂಡಿಸಲು ವರ್ಷ ಸಾಕಾಗುವುದಿಲ್ಲ ಎಂದು ಅನಿಸುತ್ತಿದೆ. ಮೊದಲು ಇವರಿಬ್ಬರನ್ನು ಜೋಡಿಸಿ ನಂತರ ಮುಂದುವರಿಯಲು ಅವರು ಮಗನಿಗೆ ಹೇಳಲಿದ್ದಾರೆ'' ಎಂದು ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.
ಮಗನ ರಾಜಕೀಯ ಭವಿಷ್ಯಕ್ಕಾಗಿ ಎರಡು ದಿನದ ಮಟ್ಟಿಗೆ ಕರ್ನಾಟಕಕ್ಕೆ ಆಗಮಿಸಿರುವ ಸೋನಿಯಾ ಗಾಂಧಿಯವರಿಗೆ ಸಿಎಂ ಕುರ್ಚಿಯ ಭ್ರಮೆಯಲ್ಲಿ ಕಾದಾಡುತ್ತಿರುವ @siddaramaiah ಹಾಗೂ @DKShivakumar ಅವರನ್ನು ಒಂದುಗೂಡಿಸಲು ವರ್ಷ ಸಾಕಾಗುವುದಿಲ್ಲ ಎಂದು ಅನಿಸುತ್ತಿದೆ.
— Nalinkumar Kateel (@nalinkateel) October 4, 2022
ಮೊದಲು ಇವರಿಬ್ಬರನ್ನು ಜೋಡಿಸಿ ನಂತರ ಮುಂದುವರೆಯಲು ಅವರು ಮಗನಿಗೆ ಹೇಳಲಿದ್ದಾರೆ.