ಜೆಡಿಎಸ್ನ 20 ಶಾಸಕರ ಜೊತೆ ಹೈದರಾಬಾದ್ಗೆ ಪ್ರಯಾಣ ಬೆಳೆಸಿದ ಹೆಚ್. ಡಿ. ಕುಮಾರಸ್ವಾಮಿ

Photo credit- ANI
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು (HD Kumaraswamy) ತಮ್ಮ ಜೆಡಿಎಸ್ ಪಕ್ಷದ 20 ಶಾಸಕರ ಜೊತೆ ಇಂದು ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ್ದಾರೆ.
ವಿಶೇಷ ವಿಮಾನದಲ್ಲಿ ತಮ್ಮ ಪುತ್ರ ನಿಖೀಲ್ ಕುಮಾರಸ್ವಾಮಿ ಹಾಗೂ ಶಾಸಕರ ಜೊತೆ ಪ್ರಯಾಣ ಬೆಳೆಸಿರುವ ಅವರು, ಇಂದು ಮತ್ತು ನಾಳೆ ಹೈದರಾಬಾದ್ನಲ್ಲಿ ವಾಸ್ತವ್ಯವಿರಲಿದ್ದಾರೆ ಎಂದು ತಿಳಿದು ಬಂದಿದೆ.
ನಾಳೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ನೂತನ ಪಕ್ಷ ಸ್ಥಾಪನೆ ಘೋಷಣೆ ಮಾಡಲಿದ್ದು, ಅವರ ಆಹ್ವಾನದ ಮೇರೆಗೆ HDK ತಂಡ ನಾಳೆ ಆ ಸಮಾರಂಭದಲ್ಲಿ ಭಾಗಿಯಾಗಲಿದೆ ಎಂಬ ಮಾಹಿತಿ ಇದೆ.
JD(S) leader and former Karnataka HD Kumaraswamy along with his MLAs arrives in Hyderabad ahead of the launch of a national party by Telangana CM KC Rao tomorrow. They were received by TRS leader & Telangana minister KT Rama Rao.
— ANI (@ANI) October 4, 2022
(Pic source: HD Kumaraswamy's office) pic.twitter.com/Jnca2OJ16D









