ಭಾರತ್ ಜೋಡೊ ಯಾತ್ರೆಯಲ್ಲಿ ಹೆಜ್ಜೆ ಹಾಕಿ, ನಿಮ್ಮ ಪಕ್ಷವನ್ನು ಜೋಡಿಸಿಕೊಳ್ಳಿ: ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಆಹ್ವಾನ

ಬೆಂಗಳೂರು: 'ಎಲ್ಲವನ್ನೂ, ಎಲ್ಲರನ್ನೂ, ಎಲ್ಲದರಲ್ಲೂ ವಿಭಜನೆ ಮಾಡಿ ಆಳುವ ಸ್ವತಃ ಬಿಜೆಪಿಯೇ ವಿಭಜನೆಯ ಹಾದಿಯಲ್ಲಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ''ನಾಯಕರಿಗೆ ಭಾರತ್ ಜೋಡೊ ಯಾತ್ರೆ #BharatJodoYatra ಗೆ ಆಹ್ವಾನಿಸುತ್ತೇವೆ, ಬನ್ನಿ ನಾಲ್ಕು ಹೆಜ್ಜೆ ಹಾಕಿ ಬಿಜೆಪಿ ನಡುವಿನ #BJPvsBJP ಕಿತ್ತಾಟದಲ್ಲಿ ಒಡೆದ ಮಡಕೆಯಾಗಿರುವ ನಿಮ್ಮ ಪಕ್ಷವನ್ನು ಜೋಡಿಸಿಕೊಳ್ಳಿ...! ನಮ್ಮ ಯಾತ್ರೆಯ ಸದಾಯಶಯವೇ ಜೋಡಿಸುವುದು'' ಎಂದು ಬಿಜೆಪಿ ನಾಯಕರನ್ನು ಕಾಂಗ್ರೆಸ್ ಆಹ್ವಾನಿಸಿದೆ.
''ಕಾಂಗ್ರೆಸ್ #BharatJodoYatra ಮಾಡಲು ಶುರು ಮಾಡಿದಮೇಲೆ ದೇಶದ ಆರ್ಥಿಕತೆಯ ದುಸ್ಥಿತಿ, ಬಡತನ ನಿರುದ್ಯೋಗದ ಬಗ್ಗೆ RSSಗೆ ಕಾಳಜಿ ಬಂದಿರುವುದು ಆಶ್ಚರ್ಯಕರ! "ಸಬ್ ಚೆಂಗಾಸಿ" ಎನ್ನುತ್ತಿದ್ದ ಬಿಜೆಪಿ ನಾಯಕರು RSS ಹೇಳಿಕೆ ಬಗ್ಗೆ ಬಾಯಿ ಬಿಡದಿರುವುದು ಇನ್ನೂ ಆಶ್ಚರ್ಯಕರ! ಈ ಬೆಳವಣಿಗೆ 'ಮೋದಿ ಹಠಾವೂ' ಯೋಜನೆಯ ಮುನ್ನುಡಿಯೇ?'' ಎಂದು ಪ್ರಶ್ನಿಸಿದೆ.
ಎಲ್ಲವನ್ನೂ, ಎಲ್ಲರನ್ನೂ, ಎಲ್ಲದರಲ್ಲೂ ವಿಭಜನೆ ಮಾಡಿ ಆಳುವ ಸ್ವತಃ ಬಿಜೆಪಿಯೇ ವಿಭಜನೆಯ ಹಾದಿಯಲ್ಲಿದೆ.@BJP4Karnataka ನಾಯಕರಿಗೆ #BharatJodoYatra ಗೆ ಆಹ್ವಾನಿಸುತ್ತೇವೆ,
— Karnataka Congress (@INCKarnataka) October 4, 2022
ಬನ್ನಿ ನಾಲ್ಕು ಹೆಜ್ಜೆ ಹಾಕಿ #BJPvsBJP ಕಿತ್ತಾಟದಲ್ಲಿ ಒಡೆದ ಮಡಕೆಯಾಗಿರುವ ನಿಮ್ಮ ಪಕ್ಷವನ್ನು ಜೋಡಿಸಿಕೊಳ್ಳಿ...!
ನಮ್ಮ ಯಾತ್ರೆಯ ಸದಾಯಶಯವೇ ಜೋಡಿಸುವುದು. pic.twitter.com/wgo29jW7TR