ಟ್ವೆಂಟಿ-20 ವಿಶ್ವಕಪ್: ಬುಮ್ರಾ ಸ್ಥಾನ ಶಮಿ ತುಂಬಲಿದ್ದಾರೆಯೇ ಎಂಬ ಪ್ರಶ್ನೆಗೆ ದ್ರಾವಿಡ್ ಪ್ರತಿಕ್ರಿಯಿಸಿದ್ದು ಹೀಗೆ

ಇಂದೋರ್: ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ Jasprit Bumrah ಗಾಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿಯುವುದು ಸಂಪೂರ್ಣ ದೃಢಪಡುವ ಮೂಲಕ ಮುಂಬರುವ ಟ್ವೆಂಟಿ-20 ವಿಶ್ವಕಪ್‌ಗೆ ಭಾರತದ ಸಿದ್ಧತೆಗೆ ತೀವ್ರ ಹಿನ್ನಡೆಯಾಗಿದೆ. ಬಿಸಿಸಿಐ ಇನ್ನೂ ಬುಮ್ರಾ ಬದಲಿ ಆಟಗಾರನನ್ನು ಹೆಸರಿಸಿಲ್ಲ ಹಾಗೂ ವೇಗಿ ಸ್ಥಾನವನ್ನು ಯಾರು ತುಂಬಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಟೀಮ್ ಇಂಡಿಯಾ ಮೂರನೇ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 49 ರನ್‌ಗಳಿಂದ ಸೋತ ನಂತರ ವಿಶ್ವಕಪ್ ಟೂರ್ನಿಯಲ್ಲಿ ಬುಮ್ರಾ ಬದಲಿಗೆ ಮುಹಮ್ಮದ್ ಶಮಿ Mohammed Shami ಭಾರತ ತಂಡವನ್ನು ಸೇರಲಿದ್ದಾರೆಯೇ? ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ Rahul Dravid ಅವರನ್ನು ಕೇಳಲಾಯಿತು.
“ಬುಮ್ರಾಗೆ ಬದಲಿ ಯಾರು ಎಂಬ ವಿಷಯದಲ್ಲಿನಾವು ಕಾದು ನೋಡೋಣ. ನಮಗೆ ಅಕ್ಟೋಬರ್ 15 ರವರೆಗೆ ಸಮಯವಿದೆ. ಆದ್ದರಿಂದ ಶಮಿ ನಿಸ್ಸಂಶಯವಾಗಿ ಮೀಸಲು ಆಟಗಾರರಾಗಿ ನಮ್ಮೊಂದಿರುತ್ತಾರೆ. ಅವರಿಗೆ ಈ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೆ ಅವರು ಈ ಸಮಯದಲ್ಲಿ ಎನ್‌ಸಿಎಯಲ್ಲಿದ್ದಾರೆ. ಅವರು ಹೇಗೆ ಚೇತರಿಸಿಕೊಳ್ಳುತ್ತಿದ್ದಾರೆ ಹಾಗೂ 14-15 ದಿನಗಳ ಕೋವಿಡ್ ನಂತರ ಅವರ ಸ್ಥಿತಿ ಏನು ಎಂಬುದರ ಕುರಿತು ನಾವು ವರದಿಗಳನ್ನು ಪಡೆಯಬೇಕಾಗಿದೆ. ವರದಿ ಬಂದ ಬಳಿಕ ಆಯ್ಕೆದಾರರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ”ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ದ್ರಾವಿಡ್ ಹೇಳಿದರು.
ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶದಲ್ಲಿ ನಡೆದಿರುವ ಎರಡು ಟಿ-20 ಸರಣಿಗಳಲ್ಲಿ ಟೀಮ್ ಇಂಡಿಯಾ ಸರಣಿಯನ್ನು ಗೆದ್ದಿರಬಹುದು. ಆದರೆ ಡೆತ್ ಬೌಲಿಂಗ್ ವಿಚಾರ ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. ಬುಮ್ರಾ ಹೊರಗುಳಿದಿರುವುದರಿಂದ, ವಿಶ್ವಕಪ್‌ಗೆ ಟೀಮ್ ಮ್ಯಾನೇಜ್‌ಮೆಂಟ್ ಯಾರನ್ನು ಕಳುಹಿಸುತ್ತದೆ ಎಂಬುದನ್ನು ನೋಡಬೇಕಾಗಿದೆ







