ನಾನ್ ಸ್ಟ್ರೈಕ್ ನಲ್ಲಿ ದ.ಆಫ್ರಿಕಾದ ಸ್ಟಬ್ಸ್ ರನ್ನು ರನೌಟ್ ಮಾಡದ ದೀಪಕ್ ಚಹಾರ್ : ವೀಡಿಯೊ ವೈರಲ್

Photo:twitter
ಹೊಸದಿಲ್ಲಿ: ಇಂದೋರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3 ನೇ ಟ್ವೆಂಟಿ-20 ಪಂದ್ಯದಲ್ಲಿ ದೀಪಕ್ ಚಹಾರ್ ಗೆ Deepak Chahar ಎದುರಾಳಿ ತಂಡ ಟ್ರಿಸ್ಟಾನ್ ಸ್ಟಬ್ಸ್ ರನ್ನು ನಾನ್ ಸ್ಟ್ರೈಕ್ ನಲ್ಲಿ ರನೌಟ್ ಮಾಡಬಹುದಿತ್ತು. ಆದರೆ ಚಹಾರ್ ಹಾಗೆ ಮಾಡದೆ ಬ್ಯಾಟರ್ ಗೆ ಎಚ್ಚರಿಕೆ ನೀಡಿದ ಪ್ರಸಂಗ ನಡೆಯಿತು. ಈ ವೀಡಿಯೊ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಕೆಲವು ಮೀಮ್ಗಳು ಹಾಗೂ ಅಭಿಮಾನಿಗಳಿಂದ ತಮಾಷೆಯ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
ಭಾರತೀಯ ಬೌಲರ್ ಚಹಾರ್ ತನ್ನ 16ನೇ ಓವರ್ನ ಮೊದಲ ಎಸೆತ ಹಾಕುವುದಕ್ಕೆ ಮುಂದಾದಾಗ ತಕ್ಷಣ ಬೌಲಿಂಗ್ ಮಾಡುವುದನ್ನು ನಿಲ್ಲಿಸಿದರು. ಕ್ರೀಸ್ ಬಿಟ್ಟು ಮುಂದೆ ಹೋಗಿದ್ದ ನಾನ್ಸ್ಟ್ರೈಕರ್ನಲ್ಲಿದ್ದ ಟ್ರಿಸ್ಟಾನ್ ಸ್ಟಬ್ಸ್ಗೆ ಎಚ್ಚರಿಕೆ ನೀಡಿದರು. ಸ್ಟಬ್ಸ್ ಅವರತ್ತ ಚಹಾರ್ ನೋಡಿದರು. ಆಗ ಸ್ಟಬ್ಸ್ ಅವರ ಮುಖದಲ್ಲಿ ನಗು ಕಂಡುಬಂತು.
ಈ ಘಟನೆಯಿಂದ ಭಾರತದ ನಾಯಕ ರೋಹಿತ್ ಶರ್ಮಾ ಮುಖದಲ್ಲಿ ಮಂದಹಾಸ ಮೂಡಿದ್ದನ್ನು ಕ್ಯಾಮರಾಗಳು ಸೆರೆ ಹಿಡಿದವು .
ದಕ್ಷಿಣ ಆಫ್ರಿಕಾ ತನ್ನ 20 ಓವರ್ಗಳಲ್ಲಿ 3 ವಿಕೆಟಿಗೆ 227 ಗಳಿಸಿತು ಹಾಗೂ ಸ್ಟಬ್ಸ್ 18 ಎಸೆತಗಳಲ್ಲಿ 23 ರನ್ಗಳ ಕೊಡುಗೆ ನೀಡಿದರು.
ಇತ್ತೀಚೆಗಷ್ಟೇ ಏಕದಿನ ಪಂದ್ಯದಲ್ಲಿ ಭಾರತದ ದೀಪ್ತಿ ಶರ್ಮಾ ಇಂಗ್ಲೆಂಡ್ನ ಚಾರ್ಲಿ ಡೀನ್ ಅವರನ್ನು ನಾನ್ ಸ್ಟ್ರೈಕ್ ಎಂಡ್ ನಲ್ಲಿ ರನೌಟ್ ಮಾಡಿದರು. ಔಟ್ ಮಾಡಿದ ವಿಧಾನದ ಬಗ್ಗೆ ಕ್ರಿಕೆಟ್ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗಿತ್ತು. ನಾನ್ ಸ್ಟ್ರೈಕರ್ ಕೊನೆಯಲ್ಲಿ ಬ್ಯಾಟರ್ 'ರನ್ ಔಟ್' ಆಗಬಹುದು ಎಂದು ಐಸಿಸಿ ನಿಯಮ ಪುಸ್ತಕಗಳು ಸ್ಪಷ್ಟವಾಗಿ ಹೇಳುತ್ತವೆ.
Deepak isnt Deepti... #mankadingpic.twitter.com/p40OoEFZR3
— Cricpedia (@_Cricpedia) October 4, 2022
This rule is specifically created to run out England players. pic.twitter.com/O9jzJrh9m5
— Rohit.Bishnoi (@The_kafir_boy_2) October 4, 2022