LIVE ನೋಡಿ - ಮೈಸೂರು ದಸರಾ: ಸಂಭ್ರಮದ ಜಂಬೂ ಸವಾರಿ ಮೆರವಣಿಗೆ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು, 'ಅಭಿಮನ್ಯು' ಅಂಬಾರಿಯನ್ನು ಹೊರಲಿದ್ದಾನೆ.
ಚಾಮುಂಡಿ ಬೆಟ್ಟದಿಂದ ಚಾಮುಂಡಿ ವಿಗ್ರಹ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಅರಮನೆಗೆ ಬಂದಿದೆ.
ಅರಮನೆಯಿಂದ ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್, ರಸ್ತೆ, ಆಯುರ್ವೇದಿಕ್ ವೃತ್ತ, ಆರ್.ಎಂ.ಸಿ, ತಿಲಕ್ ನಗರ ರಸ್ತೆ ಮೂಲಕ ಜಂಬೂ ಸವಾರಿ ಬನ್ನಿ ಮಂಟಪ ತಲುಪಲಿದೆ.
47 ಸ್ತಬ್ಧಚಿತ್ರ ಪ್ರದರ್ಶನ: ಜಂಬೂಸವಾರಿ ಮೆರವಣಿಗೆ ವೇಳೆ 47 ಸ್ತಬ್ಧಚಿತ್ರ ಪ್ರದರ್ಶನ ವಾಗಲಿವೆ. 31 ಜಿಲ್ಲೆಗಳ ಕಲೆ, ಸಾಹಿತ್ಯ, ಇತಿಹಾಸವನ್ನು ಸ್ತಬ್ಧಚಿತ್ರ ಪ್ರತಿಬಿಂಬಿಸಲಿವೆ.
Next Story