ಬೆಂಗಳೂರು | ತಾಯಿ ಹತ್ಯೆಗೆ ಸಂಚು: ಆರೋಪಿ ಪುತ್ರನ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.5: ಆಸ್ತಿ ವಿಚಾರ ಸಂಬಂಧ ತಾಯಿ ಕೊಲೆಗೆ ಸಂಚು ರೂಪಿಸಿದ್ದ ಆರೋಪದಡಿ ಪುತ್ರನನ್ನು ಇಲ್ಲಿನ ಆರ್ಟಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರದ ಜಾನ್ ಡಿ ಕ್ರೂಸ್(65) ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ವೃದ್ಧ ತಾಯಿಯ ಕೊಲೆಗೆ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.
ವೃದ್ಧೆ ಕ್ಯಾಥರಿನ್ ಎಂಬುವರಿಗೆ ನಾಲ್ವರು ಮಕ್ಕಳಿದ್ದು, ಈ ಪೈಕಿ ಹಿರಿ ಮಗ ಆರೋಪಿ ಜಾನ್ ಆಗಿದ್ದಾನೆ. ಆದರೆ, ಆಸ್ತಿ ವಿಚಾರವಾಗಿ ಸೆ.29ರಂದು ಸಂಜೆ ಮನೆಗೆ ನುಗ್ಗಿದ್ದ ಜಾನ್, ಗಲಾಟೆ ಮಾಡಿದ್ದಾನೆ. ಮನೆಯಲ್ಲಿದ್ದ ಕೆಲಸದ ಮಹಿಳೆಯನ್ನು ಹೊರಹಾಕಿ ತಾಯಿಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಹತ್ತಿರದ ಮಸೀದಿಯಿಂದ 'ಆಝಾನ್' ಕೇಳಿದ ಕೂಡಲೇ ಭಾಷಣ ನಿಲ್ಲಿಸಿದ ಅಮಿತ್ ಶಾ: ವೀಡಿಯೊ ವೈರಲ್
ಈ ಸಂಬಂಧ ಬಂದಿದ್ದ ದೂರಿನ್ವಯ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
Next Story





