ಕಾರ್ನಾಡು: ಮಿಲಾದುನ್ನಬಿ ಪ್ರಯುಕ್ತ ಮದರಸ ವಿದ್ಯಾರ್ಥಿಗಳ ಕಾರ್ಯಕ್ರಮ

ಮುಲ್ಕಿ, ಅ.5: ಶಾಫಿ ಜುಮಾ ಮಸ್ಜಿದ್ ಜಮಾಅತ್ ಮುಲ್ಕಿ ಮತ್ತು ಮಸ್ಜಿದುನ್ನೂರ್ ಜುಮಾ ಮಸೀದಿ ಕಾರ್ನಾಡು ಇದರ ಸಂಯುಕ್ತ ಆಶ್ರಯದಲ್ಲಿ ಮಿಲಾದುನ್ನಬಿ ಪ್ರಯುಕ್ತ ಕಾರ್ನಾಡು ಮಸ್ಜಿದುನ್ನೂರ್ ಮಸೀದಿಯ ಆವರಣದಲ್ಲಿ ಏರ್ಪಡಿಸಲಾಗಿರುವ ಧಾರ್ಮಿಕ ಕಾರ್ಯಕ್ರಮ ಮತ್ತು ಮದರಸ ವಿದ್ಯಾರ್ಥಿಗಳ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಮರ್ಹೂಮ್ ಅಲ್ಹಾಜ್ ಕೋಟ ಅಬ್ದುಲ್ ಕಾದರ್ ಮುಸ್ಲಿಯಾರ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಾರ್ನಾಡು ಮಸ್ಜಿದುನ್ನೂರ್ ಜುಮಾ ಮಸೀದಿಯ ಖತೀಬರಾದ ಇಸ್ಮಾಯೀಲ್ ದಾರಿಮಿ ದುವಾ ನೆರವೇರಿಸುವ ಮೂಲಕ ಉದ್ಘಾಟಿಸಿದರು.
ಮುಲ್ಕಿ ಶಾಫಿ ಜುಮಾ ಮಸೀದಿಯ ಅಧ್ಯಕ್ಷ ಲಿಯಾಕತ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಮುಲ್ಕಿ ಶಾಫಿ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಹಾಜಿ, ಕೋಶಧಿಕಾರಿ ಇಕ್ಬಾಲ್ ಅಹ್ಮದ್ ಮುಲ್ಕಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ನಾಡು ಮಸ್ಜಿದುನ್ನೂರ್ ಮಸೀದಿಯ ಸದರ್ ಉಸ್ತಾದ್ ಅಬ್ದುಲ್ ರಝಾಕ್ ಅಝ್ಹರಿ ಸ್ವಾಗತಿಸಿದರು.
Next Story





