ಕುವೈಟ್ ಪ್ರಧಾನಿಯಾಗಿ ಶೇಖ್ ಅಹ್ಮದ್ ಮರುನೇಮಕ
ಕುವೈಟ್ ಸಿಟಿ, ಅ.5: ಕುವೈಟ್ ಪ್ರಧಾನಿಯಾಗಿ ಶೇಖ್ ಅಹ್ಮದ್ ನವಾಫ್ ಅಲ್ ಸಬಾ ಅವರನ್ನು ಮರುನೇಮಕ ಮಾಡಲಾಗಿದೆ ಎಂದು ಕುವೈಟ್ ನ ಅಮೀರ್ ಆದೇಶಿಸಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಕುನಾ ವರದಿ ಮಾಡಿದೆ. ಹೊಸ ಸಚಿವ ಸಂಪುಟದ ಸದಸ್ಯರನ್ನು ನಾಮನಿರ್ದೇಶನ ಮಾಡುವಂತೆ ಮತ್ತು ಸಚಿವ ಸಂಪುಟದ ಸದಸ್ಯರ ಪಟ್ಟಿಯನ್ನು ಸಲ್ಲಿಸುವಂತೆ ಪ್ರಧಾನಿಗೆ ಸೂಚಿಸಲಾಗಿದೆ. ಪ್ರಧಾನಿ ಈ ಆದೇಶವನ್ನು ಜಾರಿಗೊಳಿಸಬೇಕು ಮತ್ತು ಅದನ್ನು ರಾಷ್ಟ್ರೀಯ ಅಸೆಂಬ್ಲಿಗೆ ಸಲ್ಲಿಸಬೇಕು. ಬಳಿಕ ಅದನ್ನು ಗಝೆಟ್ನಲ್ಲಿ ಪ್ರಕಟಿಸಲಾಗುವುದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
Next Story