ಬ್ರಿಟನ್ ರಾಯಭಾರಿಗೆ ಇರಾನ್ ಸಮನ್ಸ್
ಟೆಹ್ರಾನ್, ಅ.5: ಬ್ರಿಟನ್ ವಿದೇಶಾಂಗ ಇಲಾಖೆಯ ಹಸ್ತಕ್ಷೇಪವಾದಿ ಹೇಳಿಕೆಗೆ ಪ್ರತಿಯಾಗಿ ಇರಾನ್ನಲ್ಲಿನ ಬ್ರಿಟನ್ ರಾಯಭಾರಿಗೆ ಸಮನ್ಸ್ ನೀಡಲಾಗಿದೆ ಎಂದು ಇರಾನ್ನ ವಿದೇಶಾಂಗ ಇಲಾಖೆಯ ಅಧಿಕಾರಿಯನ್ನು ಉಲ್ಲೇಖಿಸಿ ‘ತಾಸ್ನಿಮ್’ ಸುದ್ಧಿಸಂಸ್ಥೆ ಬುಧವಾರ ವರದಿ ಮಾಡಿದೆ. ಇರಾನ್ನ ಆಂತರಿಕ ವ್ಯವಹಾರಗಳ ಕುರಿತು ಬ್ರಿಟನ್ನ ಟೀಕೆಗಳು ನಕಲಿ ಮತ್ತು ಪ್ರಚೋದನಕಾರಿ ವ್ಯಾಖ್ಯಾನಗಳನ್ನು ಆಧರಿಸಿವೆ. ಏಕಪಕ್ಷೀಯ ಹೇಳಿಕೆಗಳನ್ನು ನೀಡುವ ಮೂಲಕ ಬ್ರಿಟನ್ ಸರಕಾರ ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಸಕ್ರಿಯವಾಗಿರುವ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಇರಾನ್ನ ವಿದೇಶಾಂಗ ಸಚಿವಾಲಯದ ಪಶ್ಚಿಮ ಯುರೋಪ್ನ ಪ್ರಧಾನ ನಿರ್ದೇಶಕರು ಹೇಳಿದ್ದಾರೆ.
ಇರಾನ್ನಲ್ಲಿ ಪ್ರತಿಭಟನೆಯನ್ನು ದಮನಿಸಲು ಅಲ್ಲಿನ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಬ್ರಿಟನ್ನ ವಿದೇಶಾಂಗ ಇಲಾಖೆ ಸೋಮವಾರ ಬ್ರಿಟನ್ನಲ್ಲಿ ಇರಾನ್ನ ಚಾರ್ಜ್ ಡಿ’ಅಫೇರ್ಸ್ಗೆ ಸಮನ್ಸ್ ನೀಡಿತ್ತು.
Next Story





