ಬೆಂಗಳೂರು | ದಸರಾ: ಮೂರ್ತಿ ವಿಸರ್ಜನೆಗೆ ತೆರಳಿದ್ದ ಯುವಕರು ನೀರುಪಾಲು

ಸಾಂದರ್ಭಿಕ ಚಿತ್ರ
ಬೆಂಗಳೂರು: ದಸರಾ ಅಂಗವಾಗಿ ಪೂಜಿಸಿದ್ದ ದುರ್ಗಾಮಾತೆ ವಿಗ್ರಹ ವಿಸರ್ಜನೆಗೆ ತೆರಳಿದ್ದ ಯುವಕರು ನೀರುಪಾಲಾಗಿದ್ದಾರೆ.
ಮಹಾರಾಷ್ಟ್ರ ಮೂಲದ ಸೋಮೇಶ್(21), ಜಿತು (22) ನೀರುಪಲಾದ ಯುವಕರು ಎಂದು ತಿಳಿದು ಬಂದಿದೆ.
ದಸರಾ ಅಂಗವಾಗಿ ದುರ್ಗಾ ಮಾತೆ ವಿಗ್ರಹ ವಿಸರ್ಜನೆಗೆ ಎಂದು ಐವರು ಕೆಂಗೇರಿಯ ಸುಣಕಲ್ ಪಾಳ್ಯಕೆರೆಗೆ ಹೋಗಿದ್ದಾರೆ. ಆಗ ಕೆರೆಯಲ್ಲಿ ಐವರು ಯುವಕರು ಇಳಿದಿದ್ದಾರೆ. ಈ ವೇಳೆ ಐವರ ಪೈಕಿ ಇಬ್ಬರು ನಾತ್ತೆಯಾಗಿದ್ದಾರೆನ್ನಲಾಗಿದೆ. ಐವರು ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಆರ್.ಆರ್.ನಗರದಲ್ಲಿ ವಾಸವಿದ್ದರು ಎಂದು ಹೇಳಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ನಡೆಸಿದರೂ ಇಬ್ಬರ ಸುಳಿವು ಸಿಕ್ಕಿಲ್ಲ.
Next Story





