ಬಾಲಕಿಯ ಅತ್ಯಾಚಾರ ಆರೋಪ: ನೇಪಾಳಿ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಬಂಧನ

Sandeep Lamichhane (Photo: Twitter)
ಕಠ್ಮಂಡು: ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ನೇಪಾಳಿ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆಯನ್ನು (Former Nepali National team captain Sandeep Lamichhane) ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಗುರುವಾರ ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ನೇಪಾಳ ಕ್ರಿಕೆಟ್ ತಂಡದ ನಾಯಕ ಸಂದೀಪ್ ಲಮಿಚಾನೆ ಕಠ್ಮಂಡುವಿನ ಹೋಟೆಲ್ ಕೊಠಡಿಯಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು 17 ವರ್ಷದ ಬಾಲಕಿ ಕಳೆದ ತಿಂಗಳು ಆರೋಪಿಸಿದ್ದಳು. ಹದಿಹರೆಯದ ಹುಡುಗಿ ಕಠ್ಮಂಡುವಿನ ಗೌಶಾಲಾ ಮೆಟ್ರೋಪಾಲಿಟನ್ ಪೊಲೀಸ್ ವೃತ್ತದಲ್ಲಿ ಎಫ್ಐಆರ್ ದಾಖಲಿಸಿದ್ದಳು.
#Nepal | Former Nepali National team captain Sandeep Lamichhane, accused of raping a minor, arrested & taken into custody by police at Tribhuwan International Airport in #Kathmandu pic.twitter.com/NotzdxUPcP
— The Times Of India (@timesofindia) October 6, 2022
Next Story