ಡಿಸೆಂಬರ್ 15ರ ವೇಳೆಗೆ ರಾಜ್ಯದಲ್ಲಿ 438 'ನಮ್ಮ ಕ್ಲಿನಿಕ್' ಕಾರ್ಯಾರಂಭ: ಸಚಿವ ಡಾ. ಕೆ. ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ 438 ʼನಮ್ಮ ಕ್ಲಿನಿಕ್ʼಗಳನ್ನು ನವೆಂಬರ್ ಅಂತ್ಯ ಅಥವಾ ಡಿಸೆಂಬರ್ 15 ರ ವೇಳೆಗೆ ಕಾರ್ಯಾರಂಭಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, 438 ನಮ್ಮ ಕ್ಲಿನಿಕ್ ಗಳ ಪೈಕಿ 243 ನಮ್ಮ ಕ್ಲಿನಿಕ್ ಗಳು ಬಿಬಿಎಂಪಿ ವ್ಯಾಪ್ತಿಯಲ್ಲೇ ತಲೆ ಎತ್ತಲಿವೆ. ಇದಕ್ಕಾಗಿ ಈಗಾಗಲೇ 160 ವೈದ್ಯರ ನೇಮಕಾತಿ ಪೂರ್ಣಗೊಂಡಿದ್ದು, ಉಳಿದ ಸಿಬ್ಬಂದಿಗಳ ನೇಮಕಾತಿ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
'ನಗರ ಪ್ರದೇಶದ ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ 'ನಮ್ಮ ಕ್ಲಿನಿಕ್'ಗಳನ್ನು ಸ್ಥಾಪಿಸುತ್ತಿದ್ದು, ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ವರದಾನವಾಗಲಿವೆ. ನಮ್ಮ ಸರ್ಕಾರದ ಜನಪರ ಆಡಳಿತದ ಭಾಗವಾಗಿರುವ ಈ ಮಹತ್ವಾಕಾಂಕ್ಷೆಯ ಯೋಜನೆಯು ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸಹಕಾರಿಯಾಗಲಿದೆ' ಎಂದು ಹೇಳಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಿರ್ಮಿಸಿರುವ ಮಾದರಿ 'ನಮ್ಮ ಕ್ಲಿನಿಕ್' ಕಟ್ಟಡವನ್ನು ಇಂದು ವೀಕ್ಷಿಸಲಾಯಿತು.
— Dr Sudhakar K (@mla_sudhakar) October 6, 2022
ರಾಜ್ಯದಲ್ಲಿ ಯೋಜಿಸಿರುವ 438 'ನಮ್ಮ ಕ್ಲಿನಿಕ್'ಗಳ ಸ್ಥಾಪನಾ ಕಾರ್ಯ ಪ್ರಗತಿಯಲ್ಲಿದ್ದು ಡಿಸೆಂಬರ್ 15ರ ಒಳಗೆ ಎಲ್ಲಾ 'ನಮ್ಮ ಕ್ಲಿನಿಕ್'ಗಳು ಕಾರ್ಯಾರಂಭ ಮಾಡಲಿವೆ. #NammaClinic
1/3 pic.twitter.com/fP5MM7LRBs







