ಅಮೆರಿಕ: ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ

ನ್ಯೂಯಾರ್ಕ್, ಅ.6: ಅಮೆರಿಕದ ಇಂಡಿಯಾನ ಪ್ರಾಂತದ ಪುರ್ಡ್ಯೂ ವಿವಿಯ ಆವರಣದಲ್ಲಿರುವ ಹಾಸ್ಟೆಲ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ವರ್ಷದ ಭಾರತೀಯ ವಿದ್ಯಾರ್ಥಿ ವರುಣ್ ಮನೀಶ್ ಛೆಡಾನನ್ನು ಆತನ ಕೊಠಡಿ ಸಹವಾಸಿ(ರೂಂಮೇಟ್) ಚೂಪಾದ ಆಯುಧದಿಂದ ಇರಿದು ಹತ್ಯೆ ಮಾಡಿರುವುದಾಗಿ ಆರೋಪಿಸಲಾಗಿದೆ. ಆದರೆ ಹತ್ಯೆಯ ಬಗ್ಗೆ ಹಲವು ಪ್ರಶ್ನೆಗಳು ಉಳಿದುಕೊಂಡಿವೆ. ಪ್ರಾಥಮಿಕ ಶವಪರೀಕ್ಷೆಯ ಫಲಿತಾಂಶ ಸಾವಿನ ವಿಧಾನವು ನರಹತ್ಯೆ ಎಂದು ಹೇಳಿದರೆ, ಹಲವರು ಇದೊಂದು ಕೊಲೆ ಎಂದು ಹೇಳುತ್ತಿದ್ದಾರೆ. ಇದೊಂದು ನರಹತ್ಯೆ ಪ್ರಕರಣವಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
Next Story





