ಕಲಾಕಾರ್ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಮಂಗಳೂರು, ಅ.7: ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ನೀಡುವ 18ನೇ ಸಾಲಿನ ಕಲಾಕಾರ್ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಮೂಲದ ಸಂಗೀತ, ನಾಟಕ, ನೃತ್ಯ ಅಥವಾ ಜನಪದ ಕಲೆಯಲ್ಲಿ ಮಹತ್ವದ ಸಾಧನೆ ಮಾಡಿದ ಕೊಂಕಣಿ ಮಾತೃಭಾಷಿಕ, ಒಬ್ಬ ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ. ಪುರಸ್ಕಾರವು ಶಾಲು, ಫಲ-ಪುಷ್ಪ, ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ 25 ಸಾವಿರ ರೂ.ಗಳನ್ನು ಒಳಗೊಂಡಿರುತ್ತದೆ.
ನ.6ರಂದು ಕಲಾಂಗಣದಲ್ಲಿ ನಡೆಯುವ, ೨೫೧ ನೇ ತಿಂಗಳ ವೇದಿಕೆಯ ಕಾರ್ಯಕ್ರಮದಲ್ಲಿ ಈ ಪುರಸ್ಕಾರವನ್ನು ವಿತರಣೆ ಮಾಡಲಾಗುತ್ತದೆ. ಹಾಗಾಗಿ ಸಾಧನೆಯ ವಿವರಗಳು, ಭಾವಚಿತ್ರದೊಡನೆ ಸ್ವತಃ ಕಲಾವಿದರು ಅಥವಾ ಇತರರು ಹೆಸರು ಸಲ್ಲಿಸಬಹುದು. ವಿಳಾಸ : ಮಾಂಡ್ ಸೊಭಾಣ್, ಕಲಾಂಗಣ್, ಶಕ್ತಿನಗರ, ಮಂಗಳೂರು ಈ ವಿಳಾಸಕ್ಕೆ ಅಥವಾ email: mandd.sobhann86gmail.com ಅ.20ರೊಳಗೆ ಕಳುಹಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story