Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನನ್ನ ದೇಹ ನನ್ನದಲ್ಲವೇ?

ನನ್ನ ದೇಹ ನನ್ನದಲ್ಲವೇ?

ಶೈಲಜಶೈಲಜ8 Oct 2022 10:27 AM IST
share
ನನ್ನ ದೇಹ ನನ್ನದಲ್ಲವೇ?

ಕಾರ್ಖಾನೆ ಮತ್ತು ಕೃಷಿ ಕಾರ್ಮಿಕ ವರ್ಗದ ಹಿನ್ನೆಲೆಯಿಂದ ಬಂದ ಅರ್ನೋಸ್ ಅವರ ಇಡೀ ಕುಟುಂಬದಲ್ಲಿ ಅವರ ತಾಯಿಯ ಕಡೆಯಿಂದ ಅರ್ನೋಸ್ ಮೊದಲ ಸುಶಿಕ್ಷಿತ ವ್ಯಕ್ತಿ ಮತ್ತು ತಂದೆಯ ಕಡೆಯಿಂದ ಅವರು ಹಾಗೂ ಅವರ ಸೋದರಸಂಬಂಧಿ ಮಾತ್ರ ಸುಶಿಕ್ಷಿತರು. ಅವರಿಗೆ ಬರವಣಿಗೆ ತನ್ನ ಆ ವರ್ಗ ಅನುಭವಿಸುವ ಕೀಳರಿಮೆ, ನೋವು, ಅವಮಾನ, ತಾರತಮ್ಯ ಇವುಗಳನ್ನು ಹೇಳುವ ಒಂದು ಮಾಧ್ಯಮವೂ ಆಗಿತ್ತು. ಜೊತೆಗೆ ತಾವೆಲ್ಲರೂ ಅನುಭವಿಸಿದ ಅವಮಾನಕ್ಕೆ ತೋರುವ ಒಂದು ಪ್ರತೀಕಾರವೂ ಆಗಿತ್ತು.

2022ರ ಸಾಲಿನ ಸಾಹಿತ್ಯಕ್ಕೆ ನೀಡುವ ನೊಬೆಲ್ ಪಾರಿತೋಷಕವನ್ನು ಫ್ರೆಂಚ್ ಲೇಖಕಿ ಆ್ಯನೀ ಅರ್ನೋಸ್ ಅವರಿಗೆ ನೀಡಲಾಗಿದೆ. ಸತ್ಯವನ್ನು ದಾಖಲಿಸುವುದೇ ಒಬ್ಬ ಕಾದಂಬರಿಕಾರ್ತಿಯ ಮೂಲ ಕರ್ತವ್ಯ ಎನ್ನುವುದು ಅವರ ಅಚಲವಾದ ನಿಲುವು. 82ರ ಹರೆಯದ ಅರ್ನೋಸ್ ತನ್ನ ಕಾದಂಬರಿಗಳಲ್ಲಿ ತನ್ನ ಬದುಕಿನ ಏಳು ದಶಕಗಳ ನೆನಪುಗಳನ್ನು ದಾಖಲಿಸುತ್ತಲೇ ಇಡೀ ಫ್ರೆಂಚ್ ಸಮಾಜದ ಸಾಮುದಾಯಿಕ ನೆನಪುಗಳನ್ನೆಲ್ಲಾ ಒಂದೆಡೆ ದಾಖಲಿಸಿರುವ ಅಪರೂಪದ ಕಾದಂಬರಿಕಾರ್ತಿ. ಒಂದರ್ಥದಲ್ಲಿ ಅವರು ಫ್ರಾನ್ಸ್ ನ ಕಳೆದ 50 ವರ್ಷಗಳ ಸಾಮುದಾಯಿಕ ನೆನಪುಗಳ ರಕ್ಷಕಿ ಎಂದು ಭಾವಿಸಬಹುದೇನೊ. ಅವರ ಬರವಣಿಗೆಯ ಶೈಲಿ ಕಾದಂಬರಿ ಮತ್ತು ಜೀವನ ವೃತ್ತಾಂತದ ನಡುವಿನ ಗಡಿಗುರುತನ್ನೇ ಮಸುಕುಗೊಳಿಸುತ್ತದೆ ಎನ್ನುತ್ತಾರೆ ವಿಮರ್ಶಕರು. ಅವರ ಮೊದಲ ಕಾದಂಬರಿ ‘ಕ್ಲೀನ್ಡ್ ಔಟ್’ 1974ರಲ್ಲಿ ಪ್ರಕಟವಾಯಿತು. ‘ದ ಇಯರ್ಸ್‌’, ‘ಹ್ಯಾಪನಿಂಗ್’, ‘ಐ ರಿಮೇನ್ ಇನ್ ಡಾರ್ಕ್ ನೆಸ್’, ‘ಪೋರ್ಟೆೇಟ್ ಆಫ್ ದ ಆರ್ಟಿಸ್ಟ್ ಆ್ಯಸ್ ಎ ಯಂಗ್ ವುಮನ್’ ಇು ಅವರ ಪ್ರಮುಖ ಕಾದಂಬರಿಗಳು.


ಕಾರ್ಖಾನೆ ಮತ್ತು ಕೃಷಿ ಕಾರ್ಮಿಕ ವರ್ಗದ ಹಿನ್ನೆಲೆಯಿಂದ ಬಂದ ಅರ್ನೋಸ್ ಅವರ ಇಡೀ ಕುಟುಂಬದಲ್ಲಿ ಅವರ ತಾಯಿಯ ಕಡೆಯಿಂದ ಅರ್ನೋಸ್ ಮೊದಲ ಸುಶಿಕ್ಷಿತ ವ್ಯಕ್ತಿ ಮತ್ತು ತಂದೆಯ ಕಡೆಯಿಂದ ಅವರು ಹಾಗೂ ಅವರ ಸೋದರಸಂಬಂಧಿ ಮಾತ್ರ ಸುಶಿಕ್ಷಿತರು. ಅವರಿಗೆ ಬರವಣಿಗೆ ತನ್ನ ಆ ವರ್ಗ ಅನುಭವಿಸುವ ಕೀಳರಿಮೆ, ನೋವು, ಅವಮಾನ, ತಾರತಮ್ಯ ಇವುಗಳನ್ನು ಹೇಳುವ ಒಂದು ಮಾಧ್ಯಮವೂ ಆಗಿತ್ತು. ಜೊತೆಗೆ ತಾವೆಲ್ಲರೂ ಅನುಭವಿಸಿದ ಅವಮಾನಕ್ಕೆ ತೋರುವ ಒಂದು ಪ್ರತೀಕಾರವೂ ಆಗಿತ್ತು. ಅವರ ಹೆಚ್ಚಿನ ಕಾದಂಬರಿಯ ನಾಯಕಿಯರೆಲ್ಲರೂ ಇಂತಹ ದುಡಿಯುವ ವರ್ಗದ ಹಿನ್ನೆಲೆಯಿಂದ ಬಂದು ವಿದ್ಯಾಭ್ಯಾಸ ಮಾಡುತ್ತಿರುವವರು.


ಕ್ಲೀನ್ಡ್ ಔಟ್ ಮತ್ತು ಹ್ಯಾಪನಿಂಗ್ ಕಾದಂಬರಿಗಳು ಫ್ರಾನ್ಸಿನಲ್ಲಿ ಗರ್ಭಪಾತ ಕಾನೂನುಬಾಹಿರ ಎನಿಸಿಕೊಂಡಿದ್ದ ಕಾಲದಲ್ಲಿ ಗರ್ಭಪಾತ ಮಾಡಿಸಿಕೊಳ್ಳುವ ಘಟನೆಯನ್ನು ಕೇಂದ್ರವಾಗಿ ಹೊಂದಿದೆ. ತನ್ನ ಇಪ್ಪತ್ತರ ಹರೆಯದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಅರ್ನೋಸ್ ಅವರ ವೈಯಕ್ತಿಕ ಅನುಭವವನ್ನು ಎರಡೂ ಕಾದಂಬರಿಗಳು ಆಧರಿಸಿವೆ. ಈ ಕಾದಂಬರಿಗಳನ್ನು ನಾನು ಪೂರ್ಣವಾಗಿ ಓದಿಲ್ಲ. ಆದರೆ ಮಹಿಳೆಯೊಬ್ಬಳಿಗೆ ನೊಬೆಲ್ ಬಂತಲ್ಲಾ ಎನ್ನುವ ಸಂತೋಷದಲ್ಲಿ ಅವರ ಕುರಿತು ಇಂಟರ್‌ನೆಟ್ ನೋಡುತ್ತಿದ್ದಾಗ ಅವರ ಈ ಕಾದಂಬರಿಗಳ ಒಂದಿಷ್ಟು ಘಟನೆಗಳು ಬಿಡಿ ಬಿಡಿಯಾಗಿ ದೊರಕಿದವು. ಅವುಗಳನ್ನು ಓದುತ್ತಿದ್ದಂತೆ ನನ್ನೊಳಗೆ ಒಂದು ರೀತಿಯ ತಳಮಳ ಪ್ರಾರಂಭವಾಯಿತು. ಮನುಷ್ಯ ಸಂಬಂಧಗಳೊಳಗೆ ಇರುವ ತಣ್ಣನೆಯ ಕ್ರೌರ್ಯ ಹೆದರಿಕೆ ಹುಟ್ಟಿಸಿತ್ತು.


1963ರಲ್ಲಿ ಹೀಗೆ ಕಾನೂನಿನ ಕಣ್ಣಿಗೆ ಕಾಣದಂತೆ ಗರ್ಭಪಾತ ಮಾಡಿಸಿಕೊಳ್ಳಲು ಪಟ್ಟ ಪಡಿಪಾಟಲಿನ ಕೆಲವು ಭಾಗಗಳನ್ನು ಅಂತರ್ಜಾಲದಲ್ಲಿ ಓದಿದಾಗ ಎಲ್ಲ ಕಾಲಕ್ಕೂ ಸಲ್ಲುವ ನಮ್ಮ ಹೆಣ್ಣುಕುಲದ ಬವಣೆಗಳು ಎದೆಯನ್ನು ಹಿಂಡಿದವು. ಹೀಗೆ ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಿಕೊಳ್ಳಲು ಅಲೆದಾಡಿದ ಲೇಖಕಿ ಹೆಚ್ಚುಕಡಿಮೆ ಸಾವಿನ ಕದ ತಟ್ಟಿ ವಾಪಸ್ ಬಂದಿದ್ದರು. ಗುಟ್ಟಾಗಿ ಮೈ ಇಳಿಸಿಕೊಳ್ಳಲು ಹೋದವರನ್ನು ಆಸ್ಪತ್ರೆಗಳು, ವೈದ್ಯರು ಅದೆಷ್ಟು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಎನ್ನುವುದನ್ನು ಓದುತ್ತಿದ್ದಾಗ ನಮ್ಮ ಸಮಾಜದಲ್ಲಿ, ನನ್ನ ಆಸುಪಾಸಿನಲ್ಲಿಯೇ ಯಾವುದ್ಯಾವುದೋ ವಿಧಾನಗಳ ಮೂಲಕ ಗುಟ್ಟಾಗಿ ಗರ್ಭಪಾತ ಮಾಡಿಸಿಕೊಂಡ ವಿವಾಹಿತ, ಅವಿವಾಹಿತ ಮಹಿಳೆಯರು, ವಿಧವೆಯರು, ಅತ್ಯಾಚಾರಕ್ಕೆ ಒಳಗಾದವರ ಸಂಕಟ ನನ್ನೊಳಗೆ ಬಿಚ್ಚಿಕೊಳ್ಳಲು ಆರಂಭವಾಯಿತು. ಇಂತಹ ಪ್ರಕ್ರಿಯೆಯಲ್ಲಿ ತೀರಿ ಹೋದವರು, ಗರ್ಭಕೋಶದ ಸೋಂಕಿಗೆ ಒಳಗಾದವರು, ಮುಂದೆಂದೂ ಗರ್ಭ ಧರಿಸುವುದಕ್ಕೇ ಆಗದೇ ಹೋದವರು, ಇನ್ನು ದೂರದ ಊರಿನಲ್ಲೆಲ್ಲೋ ಮಗು ಹೆತ್ತು, ಬಿಟ್ಟು ಬಂದು ಕೊರಗಿದವರೆಲ್ಲರ ನೆನಪಾಗಿತ್ತು. ಜೊತೆಗೆ ಇತ್ತೀಚೆಗೆ ಗರ್ಭಪಾತಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಡಾಬ್ಸ್ ವರ್ಸಸ್ ಜಾಕ್‌ಸನ್ ವಿಮೆನ್ಸ್ ಹೆಲ್ತ್ ಆರ್ಗನೈಸೇಷನ್ ಕೇಸಿನಲ್ಲಿ ಸಂವಿಧಾನವು ನೀಡಿದ ಗರ್ಭಪಾತದ ಹಕ್ಕನ್ನು ನಿಷೇಧಿಸಿದ ಅಮೆರಿಕದ ಅತ್ಯುನ್ನತ ನ್ಯಾಯಾಲಯದ ತೀರ್ಪು, ಇಡೀ ಯುರೋಪಿನಲ್ಲಿ ಮತ್ತೆ ತಲೆಯೆತ್ತುತ್ತಿರುವ ಪ್ರತಿಗಾಮಿ ಪ್ರಭುತ್ವಗಳು ಇವೆಲ್ಲಾ ಮನಸ್ಸಿನಲ್ಲಿ ಹೇಳತೀರದ ಕಳವಳ ಹುಟ್ಟಿಸಿದ್ದವು. ಅದೇ ಹೊತ್ತಿಗೆ ಗರ್ಭಪಾತಕ್ಕೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಭಾರತದ ಅತ್ಯುನ್ನತ ನ್ಯಾಯಾಲಯ ನೀಡಿದ ತೀರ್ಪು ಮಹಿಳಾಪರವಾಗಿ ಒಂದಿಷ್ಟು ಒಳ್ಳೆಯದನ್ನೂ ನಿರೀಕ್ಷಿಸಬಹುದೇನೋ ಎನ್ನುವ ಆಸೆಯನ್ನೂ ಹುಟ್ಟುಹಾಕಿತ್ತು.


ಕ್ಲೀನ್ಡ್ ಔಟ್‌ನ ಅವಿವಾಹಿತ ನಾಯಕಿ ತಾನು ಗರ್ಭಿಣಿಯಾಗಿದ್ದೇನೆ ಎನ್ನುವುದನ್ನು ಪ್ರಗತಿಪರ ಚಿಂತನೆಯಿದ್ದ ವಿವಾಹಿತ ಸಹಪಾಠಿಯೊಡನೆ ಹೇಳಿಕೊಂಡು, ಗರ್ಭಪಾತ ಮಾಡಿಸಿಕೊಳ್ಳಲು ವೈದ್ಯರನ್ನು ಸೂಚಿಸಬೇಕೆಂದು ಕೇಳಿಕೊಳ್ಳುತ್ತಾಳೆ. ಮರುದಿನದಿಂದ ಆತನ ವರ್ತನೆಯೇ ಬದಲಾಗಿ, ಗೆಳತಿಯಂತೆ ಕಾಣುತ್ತಿದ್ದ ಆಕೆಯನ್ನು ಸ್ವತಃ ತಾನೂ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಾನೆ. ಏಕೆಂದರೆ, ಅವಳು ತನ್ನಿಂದ ಈಗ ಗರ್ಭ ಧರಿಸುವ ಸಾಧ್ಯತೆ ಇಲ್ಲವಲ್ಲ ಎಂದು. 

ಹೆಣ್ಣುದೇಹಕ್ಕೆ ಸಹಜವಾದ ಮುಟ್ಟು ತಪ್ಪಿದ್ದು ಉಂಟುಮಾಡುವ ಆತಂಕ, ಅದನ್ನು ಸರಿಪಡಿಸಿಕೊಳ್ಳಲು ತನ್ನ ದೇಹಕ್ಕಾಗುವ ನೋವನ್ನು ಅನುಭವಿಸುತ್ತಲೇ ಆಕೆ ಅನುಭವಿಸುವ ತೀವ್ರ ಒಂಟಿತನದ ವಿವರಣೆ, ಆಸ್ಪತ್ರೆಯಲ್ಲಿ ಡಾಕ್ಟರ್ ಏನು ಮಾಡಿದರೂ ಹೊರಬರದ ಭ್ರೂಣ, ವಿಶ್ವವಿದ್ಯಾನಿಲಯದ ಟಾಯ್ಲೆಟ್‌ನಲ್ಲಿ ಹೊರಗೆ ಬಿದ್ದು ಅಲ್ಲೆಲ್ಲಾ ರಕ್ತಮಾಂಸದ ತುಂಡುಗಳು ಹರಡಿಕೊಂಡಾಗ ಆಕೆ ಅನುಭವಿಸುವ ಮುಜುಗರ, ದುಃಖ, ನೋವು, ವಿಶ್ವಾದ್ಯಂತ ಹೆಣ್ಣು ದೇಹ ಪ್ರಕೃತಿಸಹಜವಾದ ಇಂತಹ ಯಾತನೆಯನ್ನು ಲೋಕದಲ್ಲಿ ಯಾರೊಡನೆಯೂ ಮುಕ್ತವಾಗಿ ಹಂಚಿಕೊಳ್ಳಲಾಗದೆ ಅನುಭವಿಸಿರುವ ಒಂಟಿತನ, ಯಾತನೆಯ್ನೆಲ್ಲಾ ನನ್ನ ಕಣ್ಮುಂದೆ ತಂದಿತ್ತು.

ಈ ದೈಹಿಕ, ಮಾನಸಿಕ ಯಾತನೆ ಹಾಗೂ ಒಂಟಿತನದ ಜೊತೆಗೆ ಸಾಂಸ್ಕೃತಿಕವಾಗಿ ವಿಶ್ವದ ಎಲ್ಲಾ ಸಂಸ್ಕೃತಿಗಳಲ್ಲಿಯೂ ಮಾತೃತ್ವ ಹಾಗೂ ಮಮತೆಯೇ ಹೆಣ್ಣಿನ ಮೂಲಸತ್ವ ಎಂದು ಪರಿಗಣಿಸಿರುವಾಗ, ತಾಯ್ತನ ಬೇಡ ಎನ್ನುವುದು, ಅದನ್ನು ಕದ್ದು ತೆಗೆಸಿಕೊಳ್ಳುವುದು ಅಪರಾಧ ಎನಿಸಿಕೊಂಡು, ಅವಳ ದೇಹವೇ ಅವಳದಾಗದೆ, ಅವಳು ಅಪರಾಧಿ ಸ್ಥಾನದಲ್ಲಿ ನಿಲ್ಲುವ ಸಂಕಟ ಹಾಗೂ ಪಾಪಪ್ರಜ್ಞೆ ಅವಳ ಪಾಲಿಗೆ. ಗರ್ಭಪಾತ ಕಾನೂನುಬದ್ಧ ಆಗಿರುವ ಸಂದರ್ಭಗಳಲ್ಲಿಯೂ ಗರ್ಭಪಾತವೆನ್ನುವುದು ಸಹಾನುಭೂತಿ ತೋರಬೇಕಿಲ್ಲದ ಹೆಂಗಸರಲ್ಲಿರುವ ಒಂದು ಅಸಹಜ, ಅಸಂಗತ ವಿಕೃತಿ ಎಂದು ಭಾವಿಸಲಾಗಿರುವುದು ಇನ್ನಷ್ಟು ನೋಯಿಸುತ್ತದೆ.


ಇವೆಲ್ಲವನ್ನೂ ಓದುವಾಗ ಮತ್ತಷ್ಟು ಹೆದರಿಕೆ ಹುಟ್ಟಿಸಿದ್ದು ಈ ಕಳೆದ 45 ವರ್ಷಗಳಲ್ಲಿ ಹೆಣ್ಣುಮಕ್ಕಳು ಮತ್ತು ಅವರಂತೆಯೇ ಮಾನವಪರ ನೆಲೆಯಲ್ಲಿ ಚಿಂತಿಸುವ ಗಂಡಸರು ಪ್ರಬಲವಾದ ಹೋರಾಟದಿಂದ ಒಂದು ಪ್ರಜಾಸತ್ತಾತ್ಮಕ ಆಡಳಿತ ಯಂತ್ರದ ಮೂಲಕ ಹೆಣ್ಣು ತನ್ನ ದೇಹದ ಮೇಲೆ ಪಡೆದುಕೊಂಡಿರುವ ಹಕ್ಕುಗಳೆಲ್ಲವೂ ಮತ್ತೆ ಕಳೆದುಹೋಗುವ ದಿನಗಳು ಈಗ ಬರುತ್ತಿವೆಯೇ ಎನ್ನುವ ಭಯಾನಕ ವಾಸ್ತವ.

share
ಶೈಲಜ
ಶೈಲಜ
Next Story
X