ಸಾಗರ: ಪಾಕ್ ಧ್ವಜ ಹಾರಿಸಿದ್ದಾರೆಂಬ ವದಂತಿ; ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಪೊಲೀಸರಿಂದ ಕಠಿಣ ಕ್ರಮದ ಎಚ್ಚರಿಕೆ

ಶಿವಮೊಗ್ಗ: ಸಾಗರದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಲಾಗಿದೆ ಎಂಬ ವಿಡಿಯೋ ಒಂದು ಕಳೆದ 2 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಕುರಿತು ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟನೆ ಹೊರಡಿಸಿದೆ.
ಸಾಗರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದ್ದಾರೆ ಎಂದು ವೀಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋಪರಿಶೀಲಿಸಿದ್ದು, ಅದರಲ್ಲಿರುವ ಬಾವುಟದಲ್ಲಿ ಚಂದ್ರನ ಆಕಾರವು ಕೆಳಮುಖವಾಗಿದೆ. ಇದು ಪಾಕಿಸ್ತಾನದ ಬಾವುಟವಲ್ಲ ಎಂದು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಕಠಿಣ ಕ್ರಮದ ಎಚ್ಚರಿಕೆ: ಈ ರೀತಿಯ ವದಂತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಕೊಳ್ಳೇಗಾಲ ನಗರಸಭೆ ಉಪ ಚುನಾವಣೆ | ಅನರ್ಹಗೊಂಡ ಏಳು ಸದಸ್ಯರು ಸ್ಪರ್ಧಿಸುವಂತಿಲ್ಲ: ರಾ. ಚುನಾವಣಾ ಆಯೋಗ
Next Story