ಹಳೆಯಂಗಡಿ | ಸಿ.ಎಸ್.ಐ. ಚರ್ಚ್ ನಲ್ಲಿ 'ಆತ್ಮೀಯ ಕೂಟ'

ಮುಲ್ಕಿ, ಅ.8: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ಸಿ.ಎಸ್.ಐ. ಚರ್ಚ್ ಗಳ ಮಹಿಳಾ ಕೂಟದವರಿಗಾಗಿ ಒಂದು ದಿನದ 'ಆತ್ಮೀಯ ಕೂಟ' ಹಳೆಯಂಗಡಿ ಸಿ.ಎಸ್.ಐ. ಅಮ್ಮನ್ ಚರ್ಚ್ ನಲ್ಲಿ ಶನಿವಾರ ನಡೆಯಿತು.
'ಸ್ತ್ರೀಯರ ಜೀವನದಲ್ಲಿ ಕ್ರಿಸ್ತೀಯ ಮೌಲ್ಯ ಹಾಗೂ ಜವಾಬ್ದಾರಿ' ಎಂಬ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ಕೂಟವನ್ನು ಸ್ಥಳೀಯ ಸಭಾಪಾಲಕ ರೆ.ವಿನಯಲಾಲ್ ಬಂಗೇರ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಭಿಶಿಕ್ತ ಮಹಿಳೆಯರಾದ ರೆ. ಸಿಸ್ಟರ್ ಸುಕುಮಾರಿ ಜತನ್ನ, ರೆ.ಡಾ.ಎವ್ಲಿನ್ ಅಮ್ಮಣ್ಣ, ರೆ.ಶಶಿಕಲಾ ಅಂಚನ್, ರೆ.ರೇಶ್ಮಾ ರವಿಕಲಾ, ರೆ. ರೆಚಲ್ ಮೌಲ್ಯಾಧಾರಿತ ವಿಷಯಗಳನ್ನು ಹಂಚಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಯಾಸಿಸ್ ನ ಮಹಿಳಾ ಪದಾಧಿಕಾರಿ ಕಾರ್ಯದರ್ಶಿ ಶೋಭಾ ಅಬ್ರಹಾಂ, ಕೋಶಾಧಿಕಾರಿ ಲಿಲ್ಲಿ ಜೋಯ್ಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಣಿ ಎಸ್. ಬಂಗೇರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಭಾ ಪರಿಪಾಲನಾ ಸಮಿತಿಯ ಸದಸ್ಯರಾದ ಆಸ್ಟಿನ್ ಕರ್ಕಡ, ವಸಂತ್ ಬೆರ್ನಾಡ್, ಜೇಮ್ಸ್ ಕರ್ಕಡ, ಸಿಡ್ನಿ ಕರ್ಕಡ, ಶರ್ಲಿ ಬಂಗೇರ, ಲಾವಣ್ಯಾ ಕೋಟ್ಯಾನ್ ಭಾಗವಹಿಸಿದ್ದರು.
ಕೋಶಾಧಿಕಾರಿ ಸಾರ ಕರ್ಕಡ ಸ್ವಾಗತಿಸಿದರು. ರೆನಿಟ ಕರ್ಕಡ ವಂದಿಸಿದರು. ಸುಷ್ಮಾ ಕರ್ಕಡ ಕಾರ್ಯಕ್ರಮ ನಿರೂಪಿಸಿದರು.