ಅ.9: ಪುತ್ತೂರಿನಲ್ಲಿ 30ನೇ ವರ್ಷದ ಮೀಲಾದ್ ಸಮಾವೇಶ

ಸಾಂದರ್ಭಿಕ ಚಿತ್ರ
ಪುತ್ತೂರು, ಅ.8: ದ.ಕ. ಜಿಲ್ಲಾ ಮುಸ್ಲಿಮ್ ಯುವಜನ ಪರಿಷತ್ ಮತ್ತು ಪುತ್ತೂರು ತಾಲೂಕು ಈದ್ ಮಿಲಾದ್ ಸಮಿತಿಯ ಆಶ್ರಯದಲ್ಲಿ 30ನೇ ವರ್ಷದ ಮೀಲಾದ್ ಸಮಾವೇಶ ಹಾಗೂ ಬುರ್ದಾ ಮಜ್ಲಿಸ್ ಅ.9ರಂದು ಸಂಜೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಮರ್ಹೂಂ ಬೊಳ್ವಾರ್ ಅಬ್ಬಾಸ್ ಹಾಜಿ ವೇದಿಕೆಯಲ್ಲಿ ನಡೆಯಲಿದೆ.
ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಸೈಯದ್ ಅಹ್ಮದ್ ಪೂಕೋಯ ತಂಙಳ್ ದುಆಗೈಯುವರು. ವಳಚ್ಚಿಲ್ ಕೇಂದ್ರ ಜುಮಾ ಮಸೀದಿಯ ಖತೀಬ್ ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ.ರಝಾಕ್ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಿತ್ತೂರು ಕೆಜಿಎನ್ ದಅವಾ ಕಾಲೇಜ್ ಪ್ರಾಂಶುಪಾಲ ಹುಸೈನ್ ಅಹ್ಸನಿ ಅಲ್ ಮುಈನಿ ಮರ್ನಾಡ್ ಪ್ರವಚನ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಆಪತ್ಬಾಂದವ ವಿದ್ಯಾರ್ಥಿ ಸಿಝಾನ್ ಉಪ್ಪಿನಂಗಡಿ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಬುರ್ದಾ ಮಜ್ಲಿಸ್ ನಡೆಯಲಿದೆ. ಸಮಾವೇಶಕ್ಕೆ ಮೊದಲು ನಗರದ ದರ್ಬೆ ಜಂಕ್ಷನ್ನಿಂದ ಕಿಲ್ಲೆ ಮೈದಾನದ ತನಕ ಮುಖ್ಯರಸ್ತೆಯಲ್ಲಿ ದಫ್ ಮತ್ತು ಸ್ಕೌಟ್ ತಂಡಗಳೊಂದಿಗೆ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಉದ್ಯಮಿ ಹಸೈನಾರ್ ಹಾಜಿ ಜಾಥಾ ಉದ್ಘಾಟಿಸಲಿದ್ದಾರೆ. ಕರ್ನಾಟಕ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಖಾಸಿಂ ಹಾಜಿ ಮಿತ್ತೂರು ಧ್ವಜ ಸ್ವೀಕಾರ ಮಾಡಲಿದ್ದಾರೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.