ಮಂಗಳೂರು: ಟೋಲ್ ಹೋರಾಟ ಬೆಂಬಲಿಸಿ ವಕೀಲರ ಸಭೆ

ಮಂಗಳೂರು, ಅ.8: ಸುರತ್ಕಲ್ ಟೋಲ್‌ಗೇಟ್‌ಗೆ ಅ.18ರಂದು ಮುತ್ತಿಗೆ ಹಾಕಿ ನಡೆಸಲಾಗುವ ಪ್ರತಿಭಟನೆ ಯನ್ನು ಬೆಂಬಲಿಸಿ ನಗರದ ಜನಪರ ನಿಲುವಿನ ವಕೀಲರು ಶನಿವಾರ ನಗರದಲ್ಲಿ ಸಭೆ ನಡೆಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಭಾತರ ವಕೀಲರ ಸಂಘದ ದ.ಕ. ಜಿಲ್ಲಾಧ್ಯಕ್ಷ ಯಶವಂತ ಮರೋಳಿ ಟೋಲ್‌ಗೇಟ್ ವಿರೋಧಿ ಹೋರಾಟಗಾರರ ಜೊತೆ ನಾವು ಎಲ್ಲಾ ವಿಧದಲ್ಲೂ ನಿಲ್ಲಬೇಕಿದೆ ಎಂದು ಹೇಳಿದರು.
ಮುತ್ತಿಗೆ ಸಂದರ್ಭ ಹೋರಾಟಗಾರರಿಗೆ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಇಡೀ ತಂಡ ಕಾನೂನಿನ ನೆರವು ಒದಗಿಸುವುದಾಗಿ ಸಭೆಯು ತೀರ್ಮಾನ ಕೈಗೊಂಡಿತು. ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹೋರಾಟದ ಬಗ್ಗೆ ವಿವರಿಸಿದರು.
ಮಾಜಿ ರಾಜ್ಯಸಭಾ ಸದಸ್ಯ, ನ್ಯಾಯವಾದಿ ಬಿ. ಇಬ್ರಾಹೀಂ, ಮಂಗಳೂರು ಬಾರ್ ಎಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಎಸ್ಪಿ ಚೆಂಗಪ್ಪ, ಟಿ.ಎನ್. ಪೂಜಾರಿ, ಪದ್ಮರಾಜ್ ಕುದ್ರೋಳಿ, ಅಜಿತ್ ಕುಮಾರ್, ಅಶೋಕ್ ಕಾರಂದೂರು, ರಾಮಚಂದ್ರ ಬಬ್ಬುಕಟ್ಟೆ, ಜೀಷನ್ ಅಲಿ, ಸುಂದರ್ ಗೌಡ, ಮುಕ್ತಾರ್ ಅಹ್ಮದ್, ಪಿಸಿ ಸಾಲ್ಯಾನ್, ಸತೀಶ್ ಬಿ, ಮರೀಝಾ ಪಿಂಟೊ, ಸರ್ಫ್ರಾಝ್ ಚಣ್ ಶೆಟ್ಟಿ, ಸುನಂದ ಕೊಂಚಾಡಿ, ಮನೋಜ್ ವಾಂಮಜೂರು ಉಪಸ್ಥಿತರಿದ್ದರು.
ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ ಪ್ರಾಸ್ತಾವಿಕವಾಗಿ ಮಾತಾಡಿದರು. ನಿತಿನ್ ಕುತ್ತಾರ್ ಸ್ವಾಗತಿಸಿದರು.







