ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದಾರೆಂಬ ವದಂತಿಗಳ ಬಗ್ಗೆ ಸ್ಪಷ್ಟಣೆ ನೀಡಿದ ಶಶಿ ತರೂರ್

ಶಶಿ ತರೂರ್ (Photo: Twitter/ShashiTharoor)
ಹೊಸದಿಲ್ಲಿ: ಅಕ್ಟೋಬರ್ 17 ರಂದು ನಡೆಯಲಿರುವ ಕಾಂಗ್ರೆಸ್ನ(Congress) ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯಲ್ಲ ಎಂದು ಸಂಸದ ಶಶಿ ತರೂರ್ (Shashi Tharoor) ಹೇಳಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತೊಡಗಿರುವ ತರೂರ್, "ಸವಾಲಿನಿಂದ ಹಿಂದೆ ಸರಿಯುವುದಿಲ್ಲ ಮತ್ತು ಇದು ಅಂತಿಮ ಹೋರಾಟ" ಎಂದು ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದಾರೆಂಬ ವದಂತಿಗಳ ಬಗ್ಗೆ ಸ್ಪಷ್ಟಣೆ ನೀಡಿದ್ದಾರೆ.
"ನಾನು ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂಬ ವದಂತಿಗಳು ಹರಿದಾಡುತ್ತಿದ್ದು, ನಿಮಗೆ ಭರವಸೆ ನೀಡುತ್ತೇನೆ. ನಾನು ಸವಾಲಿನಿಂದ ಹಿಂದೆ ಸರಿಯಲ್ಲ. ನನ್ನ ಜೀವನದುದ್ದಕ್ಕೂ ಎಂದಿಗೂ ಹೋರಾಟದಿಂದ ನಿರ್ಗಮಿಸುವುದಿಲ್ಲ. ಇದು ಸ್ನೇಹಪರ ಸ್ಪರ್ಧೆ. ನಾನು ಸ್ಪರ್ಧೆಯಲ್ಲಿ ಉಳಿಯಲಿದ್ದೇನೆ" ಎಂದು ತರೂರ್ ಹೇಳಿದ್ದಾರೆ.
ಅಕ್ಟೋಬರ್ 17 ರಂದು ನಡೆಯಲಿರುವ ಕಾಂಗ್ರೆಸ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ತರೂರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎದುರಿಸಲಿದ್ದಾರೆ.
ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಟ್ವೀಟ್ ಮೂಲಕ ಸಂದೇಶ ನೀಡಿದ ತರೂರ್, "ಇದು ಪಕ್ಷದೊಳಗಿನ ಸೌಹಾರ್ದ ಸ್ಪರ್ಧೆ. ಇದು ಅಂತಿಮ ಹೋರಾಟ ಮತ್ತು ನಾನು ಸ್ಪರ್ಧೆಯಲ್ಲಿ ಉಳಿಯಲಿದ್ದೇನೆ. ದಯವಿಟ್ಟು ಅ. 17 ರಂದು ನನಗೆ ಮತ ಚಲಾಯಿಸಿ. ನಾಳೆ ಬಗ್ಗೆ ಯೋಚಿಸಿ, ತರೂರ್ ಬಗ್ಗೆ ಯೋಚಿಸಿ" ಎಂದು ಅವರು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯು ಅ. 17ರಂದು ನಡೆಯಲಿದ್ದು, ಅ.19ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಗೃಹ ಸಚಿವಾಲಯದ ಸಮೀಕ್ಷೆ ಪ್ರಕಾರ ಈ ರಾಜ್ಯದಲ್ಲಿ ಬಾಲ್ಯ ವಿವಾಹ ಅಧಿಕ
Surprised to get calls saying that “sources in Delhi” claim that I have withdrawn! I am on this race till the finish. #ThinkTomorrowThinkTharoor pic.twitter.com/zF3HZ8LtH5
— Shashi Tharoor (@ShashiTharoor) October 8, 2022







