ಪುತ್ತೂರು: ಯುವ ಉದ್ಯಮಿ ಆತ್ಮಹತ್ಯೆ
ಪುತ್ತೂರು: ನೆಹರುನಗರದಲ್ಲಿರುವ ಜಾಕಿ ಫರ್ನಿಚರ್ಸ್ ಮಾಲಕ, ಯುವ ಉದ್ಯಮಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಪುತ್ತೂರು ತಾಲೂಕಿನ ಬನ್ನೂರು ಸಮೀಪದ ಗುರುಂಪುನಾರ್ ನಿವಾಸಿ ಅಫಾಕ್ (37) ಮೃತರು.
ನೆಹರು ನಗರದಲ್ಲಿರುವ ಕೆಜೆಎಂ ಫರ್ನಿಚರ್ಸ್ ಅಂಗಡಿಯ ಮೊದಲನೇ ಮಹಡಿಯ ಕೊಠಡಿಯಲ್ಲಿ ಆಫಾಕ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಉದ್ಯಮದಲ್ಲಿ ಉಂಟಾದ ನಷ್ಟಗಳು ಹಾಗೂ ಸಾಲದ ಕಾರಣದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಪೊಲೀಸರು ತೆರಳಿದ್ದಾರೆ. ಮೃತರು ತಂದೆ, ಸಹೋದರರು ಮತ್ತು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.
ಈ ಬಗ್ಗೆ ಪುತ್ತೂರಿನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story