ವಿವಿಧ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿದ ಮುಸ್ಲಿಂ ಸಮುದಾಯಕ್ಕೆ ‘ಸೂಕ್ತ ಪಾಲು’ ಸಿಕ್ಕಿಲ್ಲ: ಶರದ್ ಪವಾರ್

ಹೊಸದಿಲ್ಲಿ,ಅ.8: ವಿವಿಧ ಕ್ಷೇತ್ರಗಳಿಗೆ ಮುಸ್ಲಿಮರು ಗಣನೀಯ ಕೊಡುಗೆಯನ್ನು ನೀಡಿರುವರಾದರೂ, ಆ ಸಮುದಾಯಕ್ಕೆ ಸೂಕ್ತವಾದ ಪಾಲು ದೊರಕಿಸಿಕೊಡಲು ಮಾರ್ಗೊಪಾಯಗಳನ್ನು ಕಂಡುಹಿಡಿಯಬೇಕೆಂದು ಎನ್‌ಸಿಪಿ ನಾಯಕ ಶರದ್ ಪವಾರ್ ಶನಿವಾರ ಕರೆ ನೀಡಿದ್ದಾರೆ.
‘‘ಭಾರತೀಯ ಮುಸ್ಲಿಮರ ಮುಂದಿರುವ ಸಮಸ್ಯೆಗಳು’’ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು ಉರ್ದು ಭಾಷೆಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವನ್ನು ಒತ್ತಿಹೇಳಿದರು. ಇದೇ ವೇಳೆ, ಆಯಾ ರಾಜ್ಯಗಳು ಮುಖ್ಯ ಭಾಷೆಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.
ಮುಸ್ಲಿಮ್ ಸಮುದಾಯದಲ್ಲಿ ಅಧಿಕ ಪ್ರಮಾಣದ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವ ಬಗ್ಗೆ ಪ್ರಸ್ತಾವಿಸಿದ ಅವರು ನಿರುದ್ಯೋಗವು ಪ್ರಸಕ್ತ ಎಲ್ಲಾ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಆಗಿದೆ. ಆದರೆ ಈ ಬಗ್ಗೆ ಅಲ್ಪಸಂಖ್ಯಾತ ಸಮುದಾಯದ ಅಹವಾಲುಗಳು ಅಪ್ಪಟವಾಗಿದ್ದು, ಅವುಗಳಿಗೆ ಸ್ಪಂದಿಸಬೇಕಾಗಿದೆ ಎಂದವರು. ಉರ್ದು ಭಾಷಾ ಬರವಣಿಗೆ, ಕಲೆ, ಕವನ ಕ್ಷೇತ್ರಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಬಹುದಾಗಿದೆ ಎಂದರು. ಮುಸ್ಲಿಮರು ಗುಣಮಟ್ಟ ಹಾಗೂ ಅರ್ಹತೆಯನ್ನು ಹೊಂದಿದ್ದರಾದರೂ, ಅವರಿಗೆ ಬೆಂಬಲ ಹಾಗೂ ಸಮಾನ ಅವಕಾಶದ ಅಗತ್ಯವಿದೆಯೆಂದು ಪವಾರ್ ತಿಳಿಸಿದರು.
ಹಿಂದಿ ಚಿತ್ರೋದ್ಯಮಕ್ಕೂ ಮುಸ್ಲಿಂ ಸಮುದಾಯವು ಅತಿ ದೊಡ್ಡ ಕೊಡುಗೆ ನೀಡಿದ್ದು, ಅದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆಂಬುದನ್ನು ಯಾರೂ ನಿರ್ಲಕ್ಷಿಸುವಂತಿಲ್ಲವೆಂದರು. ಕೇರಳದಲ್ಲಿ ದೊಡ್ಡ ಪ್ರಮಾಣದಲ್ಲಿ ಅಲ್ಪಸಂಖ್ಯಾತರನ್ನು ಹೊಂದಿದ ರಾಜ್ಯವಾಗಿದೆ. ಅತ್ಯಧಿಕ ಸಾಕ್ಷರತಾ ಪ್ರಮಾಣವಿರುವ ಆ ರಾಜ್ಯವು ಮುಖ್ಯ ಭಾಷೆಗೆ ಬೆಂಬಲ ನೀಡುತ್ತದೆ ಹಾಗೂ ಅದರಿಂದ ದೊರೆಯುವ ಪ್ರೋಜನಗಗನ್ನು ಪಡೆದುಕೊಳ್ಳುತ್ತಿದೆ ಎಂದು ಪವಾರ್ ಹೇಳಿದು.







