Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಾಂಸಾಹಾರದ ಮೇಲೆ ಯಾಕಿಷ್ಟು ದ್ವೇಷ?

ಮಾಂಸಾಹಾರದ ಮೇಲೆ ಯಾಕಿಷ್ಟು ದ್ವೇಷ?

ಧಮ್ಮಪ್ರಿಯ, ಬೆಂಗಳೂರುಧಮ್ಮಪ್ರಿಯ, ಬೆಂಗಳೂರು9 Oct 2022 10:06 AM IST
share
ಮಾಂಸಾಹಾರದ ಮೇಲೆ ಯಾಕಿಷ್ಟು ದ್ವೇಷ?

ಇತ್ತೀಚೆಗೆ ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ನೀಡಿದ ‘ಮಾಂಸಾಹಾರ ಆರೋಗ್ಯಕ್ಕೆ ಕೆಟ್ಟದು’ ಎಂಬ ಹೇಳಿಕೆ ದೇಶದ ಜನರಲ್ಲಿ ಗೊಂದಲ ಮೂಡಿಸಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಭಾರತ ತನ್ನ ಭೌಗೋಳಿಕ ನೆಲೆಗಟ್ಟಿನ ಆಧಾರದ ಮೇಲೆ ವಿವಿಧ ಭಾಷೆ, ವಿವಿಧ ಸಂಸ್ಕೃತಿ, ವಿವಿಧ ಆಚಾರ ವಿಚಾರ, ಸಂಪ್ರದಾಯ, ಉಡುಗೆ ತೊಡುಗೆ, ವಿವಿಧ ಧಾರ್ಮಿಕ ಆಚರಣೆಗಳು, ವಿಭಿನ್ನ ಧರ್ಮಗಳನ್ನೊಳಗೊಂಡ ಒಂದು ಉಪಖಂಡವಾಗಿದೆ. ಈ ಹಿನ್ನೆಲೆಯಲ್ಲಿ ದೇಶವನ್ನು ಏಕತೆಯಲ್ಲಿ ಒಗ್ಗೂಡಿಸಬೇಕೆಂದು ಸ್ವಾತಂತ್ರ್ಯ ಚಳವಳಿಯ ನಾಯಕರು ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿ ದರು. ಅಂದು ಸಂಸ್ಥೆಯಾಗಿ ಕಾರ್ಯನಿರ್ವಹಿಸಿದ ಕಾಂಗ್ರೆಸ್ ನಂತರ ದೇಶದ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ದೇಶದ ಎಲ್ಲಾ ಜನಾಂಗದ ಹಿತದೃಷ್ಟಿಯಿಂದ ದೇಶಕ್ಕೆ ಒಂದು ಕಾನೂನಾತ್ಮಕ ಸಂವಿಧಾನವನ್ನು ರಚಿಸಿ ಜಾರಿಮಾಡಲಾಯಿತು. ಅಲ್ಲಿಯವರೆಗೂ ಸಂಸ್ಥಾನಗಳಾಗಿದ್ದ ಇಡೀ ದೇಶವನ್ನು, ವಿವಿಧ ರಾಜ್ಯಗಳಾಗಿ ಪುನರ್ ವಿಂಗಡಣೆ ಮಾಡಿ, ಗಣತಂತ್ರ ರಾಜ್ಯವನ್ನಾಗಿ ನಿರ್ಮಿಸಲಾಯಿತು. ಸಂವಿಧಾನದ ನೆರಳಲ್ಲಿ ಬದುಕುವ ಭಾರತೀಯರಿಗೆ ಅದು ಸಮಾನತೆಯನ್ನು ಸಾರುವ ಹೆಮ್ಮರವಾಗಿ ಹೊರಹೊಮ್ಮಿತು. ಅದಕ್ಕಾಗಿಯೇ ಚಹ ಮಾರಿದ್ದೇನೆ ಎನ್ನುವ ಸಾಮಾನ್ಯ ಪ್ರಜೆಯನ್ನೂ ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗುವ ಅವಕಾಶವನ್ನು ಸಂವಿಧಾನ ಒದಗಿಸಿತು.

ಹಾಗೆಯೇ ಬೀದಿ ದೀಪದ ಕೆಳಗೆ ಓದಲು ಕುಳಿತ ಸಾಮಾನ್ಯ ಪ್ರಜೆಯೂ ರಾಷ್ಟ್ರಪತಿಯಾಗಿ ಅಧಿಕಾರ ನಡೆಸುವ ಸಮಾನತೆಯನ್ನು ಸಂವಿಧಾನ ಒದಗಿಸಿಕೊಟ್ಟಿದೆ. ಇದನ್ನು ಭಾರತೀಯರಾದ ನಾವು ಮರೆಯುವಂತಿಲ್ಲ. ನಮ್ಮ ಸಂವಿಧಾನವು ಸಮಾನತೆಯ ಜೊತೆಗೆ ವಾಕ್ ಸ್ವಾತಂತ್ರ್ಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಆಹಾರ ಪದ್ಧತಿ, ಉಡುಗೆ ತೊಡುಗೆ ಎಲ್ಲದರಲ್ಲೂ ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದೆ. ಇದನ್ನು ಯಾವ ಸಂಘಟನೆಯೂ ಪ್ರಶ್ನಿಸುವ, ಬಹಿಸ್ಕರಿಸುವ, ಹೀಯಾಳಿಸುವ, ದೂರುವ ಅಗತ್ಯವಿಲ್ಲ. ಈ ದೇಶದಲ್ಲಿ ಶೇ.95ಕ್ಕೂ ಹೆಚ್ಚು ಜನ ಮಾಂಸ ತಿನ್ನುತ್ತಿದ್ದಾರೆ. ಮಾಂಸಾಹಾರ ಬಹಳ ಕೆಟ್ಟದ್ದು ಎನ್ನುವುದಾದರೆ ನಮ್ಮ ದೇಶದಲ್ಲಿ ಈಗಿರುವ ಪೀಳಿಗೆ ಇಷ್ಟು ಹೊತ್ತಿಗೆ ಭೂಮಂಡಲದಲ್ಲಿ ಕಾಣೆಯಾಗಬೇಕಿತ್ತು ಅಲ್ಲವೇ.

 ಈ ದೇಶದಲ್ಲಿ ಮಾಂಸಾಹಾರ ನಿಷೇಧ ಆಗಬೇಕು, ಗೋವಿನ ಮಾಂಸವನ್ನು ನಿಷೇಧಿಸಬೇಕು, ಪ್ರಾಣಿಗಳ ಮೇಲೆ ದಯೆ ತೋರಬೇಕು ಎನ್ನುವ, ಶತಮಾನಗಳಿಂದ ಈ ದೇಶದಲ್ಲಿ ದಲಿತರು-ಅಸ್ಪೃಶ್ಯರನ್ನು ಹಂದಿ ನಾಯಿಗಳಿಗೂ ಕಡೆಯಾಗಿ ನಡೆಸಿಕೊಂಡಿರುವ ಸನಾತನವಾದಿಗಳಿಗೆ ಪ್ರಾಣಿಗಳ ಮೇಲಿರುವ ಕರುಣೆ, ಪ್ರೀತಿ, ದಯೆ ಸಾಮಾನ್ಯ ಮನುಷ್ಯನ ಮೇಲೆ ಏಕಿಲ್ಲ? ಭಾಗವತ್‌ರಂತಹವರ ಮಾತುಗಳೆಲ್ಲವೂ ಕೇವಲ ಬೂಟಾಟಿಕೆಯ ಮಾತುಗಳು, ಧರ್ಮದ ಮಂಪರಿನಲ್ಲಿ ಆಡುವ ಮಾತುಗಳು ಅಷ್ಟೇ, ಇವತ್ತಿನ ರಾಜಕಾರಣಕ್ಕೆ ಇಂತಹ ಮಾತುಗಳ ಅನಿವಾರ್ಯತೆ ಇದೆ.

ಇವೆಲ್ಲವು ಪಟ್ಟಭದ್ರ ಹಿತಾಸಕ್ತಿಗಳ ನಿಲುವು ಎಂದರೆ ತಪ್ಪಾಗಲಾರದು. ಇಂದು ಸಂಘ ಪರಿವಾರದ ಕಪಿ ಮುಷ್ಟಿಯಲ್ಲಿ ಸಿಲುಕಿರುವ ಆಡಳಿತಾರೂಢ ಪಕ್ಷಕ್ಕೆ ಈ ಮಾಂಸಾಹಾರವನ್ನು ನಿಷೇಧಿಸುವುದು ಯಾವ ಲೆಕ್ಕವೂ ಅಲ್ಲ. ಭಾಗವತ್‌ರೇ, ನೀವು ಹೇಳುವಂತೆ ಮಾಂಸ ತಿನ್ನುವುದು ಕೆಟ್ಟದ್ದು, ಅದರಿಂದ ಜನರು ತಪ್ಪುದಾರಿ ಹಿಡಿಯುತ್ತಾರೆ ಎನ್ನುವುದಾದರೆ ಮೊದಲು ನಿಮ್ಮ ಸಂಘಟನೆಯಲ್ಲಿರುವ ದಲಿತ, ಅಸ್ಪೃಶ್ಯ, ಹಿಂದುಳಿದ, ಶೂದ್ರರೆಲ್ಲರನ್ನು ಸಂಘ ಪರಿವಾರದಿಂದ ಹೊರಹಾಕಬಹುದಲ್ಲವೇ? ಅಷ್ಟೇ ಏಕೆ ನೀವು ಬೆಂಬಲಿಸುವ ರಾಜಕೀಯ ಪಕ್ಷದಲ್ಲಿರುವ ಮೀಸಲು ಕ್ಷೇತ್ರದ ನಾಯಕರೆಲ್ಲರೂ ಮಾಂಸಾಹಾರಿಗಳಾಗಿರುವುದರಿಂದ ಮೀಸಲು ಕ್ಷೇತ್ರಗಳ ನಾಯಕರ ಅಗತ್ಯತೆ ಅವರಿಗೆ ಯಾಕೆ ಬೇಕಾಗಿದೆ? ಮೀಸಲು ಕ್ಷೇತ್ರಗಳಲ್ಲಿ ಆ ಪಕ್ಷದಿಂದ ಸ್ವರ್ಧಿಸುವುದನ್ನು ನಿಷೇಧ ಮಾಡಬಹುದಲ್ಲವೇ? ಇವೆಲ್ಲ ಕೇವಲ ದೊಂಬರಾಟದ, ಧರ್ಮದ ಮಂಪರಿನಲ್ಲಿ ಮಾತನಾಡುವ ಮಾತುಗಳು.

ನಿಮಗೆ ನಿಜವಾಗಿಯೂ ಮಾಂಸ ಮಾರಾಟ ಹಾಗೂ ಮಾಂಸಾಹಾರ ನಿಷೇಧ ಮಾಡಬೇಕು ಎನಿಸಿದರೆ ಮೊದಲು ಈ ದೇಶದಲ್ಲಿರುವ ಮೇಲ್ಜಾತಿಯವರ ಒಡೆತನದಲ್ಲಿರುವ ಏಳು ಬೀಫ್ ಎಕ್ಸ್‌ಫೋರ್ಟ್ ಕಂಪೆನಿಗಳನ್ನು ಮುಚ್ಚಲು ಇಂದಿನ ಸರಕಾರವನ್ನು ಒಪ್ಪಿಸಬಹುದಲ್ಲವೇ? ಈ ಎಲ್ಲಾ ಕಂಪೆನಿಗಳು ಇರುವುದು ಈ ದೇಶದ ವಿವಿಧ ರಾಜ್ಯಗಳಾದ ಉತ್ತರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಹೈದರಾಬಾದ್, ಚೆನ್ನೈನಲ್ಲಿ. ಇವುಗಳ ವಾರ್ಷಿಕ ವಹಿವಾಟು 27 ಲಕ್ಷ ಕೋಟಿ ರೂ.. ಸರಕಾರದ ವರದಿಯೇ ಹೇಳುವ ಹಾಗೆ 13 ಲಕ್ಷ ಟನ್ ಗೋಮಾಂಸ (ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ಅಭಿವೃದ್ಧಿ ಪ್ರಾಧಿಕಾರದ ವರದಿ) ರಫ್ತಾಗುತ್ತಿದೆ. ಆದರೆ ಅಮೆರಿಕ ಕೃಷಿ ಇಲಾಖೆಯ ವರದಿ ಪ್ರಕಾರ 24 ಲಕ್ಷ ಟನ್ ವರ್ಷಕ್ಕೆ ರಫ್ತಾಗುತ್ತಿದೆ.

 ಮುಂದೆ ಗೋವಿನ ಮಾಂಸ ರಫ್ತಿನ ಗುರಿ ವರ್ಷಕ್ಕೆ 35 ಲಕ್ಷ ಟನ್‌ಗೆ ಏರಿಸಲಾಗಿದೆಯಂತೆ. ಈಗ ಹೇಳಿ ನೀವು ಆಡುತ್ತಿರುವುದು ದೊಂಬರಾಟವಲ್ಲವೇ? ನೀವು ಯಾಕೆ ಈ ಕಂಪೆನಿಗಳನ್ನು ಮುಚ್ಚಿಸಲು ಹೋರಾಟ ನಡೆಸಬಾರದು? ಅದನ್ನು ಬಿಟ್ಟು ಇಲ್ಲಿನ ದಲಿತ, ಹಿಂದುಳಿದ ವರ್ಗ, ಧಾರ್ಮಿಕ ಅಲ್ಪಸಂಖ್ಯಾತರು ತಿನ್ನುವ ಆಹಾರದ ಮೇಲೆ ನಿಮಗೇಕೆ ಕಣ್ಣು?

ಕೇವಲ ಆಹಾರ ಪದ್ಧತಿಯನ್ನು ಚರ್ಚಿಸುವ ಬದಲು ದೇಶದಲ್ಲಿ ಹಲವಾರು ಸಮಸ್ಯೆಗಳು ತಲೆಯೆತ್ತಿವೆ, ಅದೆಷ್ಟೋ ಸಮಸ್ಯೆಗಳು ಬಗೆಹರಿಯಲಾರದೆ ಹಾಗೆಯೇ ಉಳಿದಿವೆ. ಇವುಗಳ ಬಗ್ಗೆ ನಿಮಗೆ ಕಾಳಜಿ ಇದ್ದಿದ್ದರೆ ಈ ದೇಶದಲ್ಲಿ ಕೋಮು ಗಲಭೆಗಳಿಗೆ ಅವಕಾಶಗಳೇ ಇರುತ್ತಿರಲಿಲ್ಲ. ಅಭಿವೃದ್ಧಿ ರಾಷ್ಟ್ರಗಳ ಪಟ್ಟಿಯಲ್ಲಿ ದೇಶ 3ರಿಂದ 163ನೇ ಸ್ಥಾನಕ್ಕೆ ಇಳಿಯುತ್ತಿರಲಿಲ್ಲ.

* ಈ ದೇಶದಲ್ಲಿ ಪ್ರತೀ ಗಂಟೆಗೆ 350ರಿಂದ 400 ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ. ಹುಟ್ಟುತ್ತಿರುವ ಜೀವಗಳಿಗೆ ಇಲ್ಲಿ ಬೆಲೆಯೇ ಇಲ್ಲವೇ?

* ವಾಸಿಸಲು ಮನೆಯೇ ಇಲ್ಲದೆ ಎಷ್ಟೋ ಕುಟುಂಬಗಳು ಮಳೆಯಲ್ಲಿ ಕೊಚ್ಚಿ ಹೋಗಿವೆ. ಈ ಜೀವಗಳಿಗೆ ಬೆಲೆ ಇಲ್ಲವೇ? * ಕೊರೋನ ಮಹಾಮಾರಿಗೆ ತುತ್ತಾದವರಿಗೆ ಚಿಕಿತ್ಸೆ ಸಿಗಲಾರದೆ ಬೀದಿಯಲ್ಲಿ ನರಳಿ ಸತ್ತರು. ಆ ಜೀವಗಳಿಗೆ ಬೆಲೆ ಇಲ್ಲವೇ?

 * ಪ್ರತೀ ವರ್ಷ ಅತಿವೃಷ್ಟಿ ಅನಾವೃಷ್ಟಿಯಿಂದ ಬಳಲಿದ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ರೈತರ ಸಾಲ ಮನ್ನಾ ಮಾಡಲು ಇಷ್ಟವಿಲ್ಲದ ಸರಕಾರ ಖಾಸಗಿ ಕಂಪೆನಿಗಳ ಕೋಟಿಗಟ್ಟಲೆ ಸಾಲವನ್ನು ಮನ್ನಾ ಮಾಡುತ್ತಿದೆ. ದೇಶದ ಬೆನ್ನೆಲುಬು ರೈತರ ಜೀವಗಳ ಬೆಲೆ ಗೊತ್ತಿಲ್ಲವೇ?

* ಸಾವಿರಾರು ಕಂಪೆನಿಗಳನ್ನು ಖಾಸಗಿಯವರ ಕೈಯಲ್ಲಿಟ್ಟಾಗ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡು ಬೀದಿಪಾಲಾದರೂ ನಿಮಗೆ ಮಾತನಾಡಬೇಕೆನಿಸಲಿಲ್ಲವೇ?

* ನಿರಂತರವಾಗಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು, ವಿದ್ಯಾರ್ಥಿಗಳ ಮೇಲಿನ ಹಲ್ಲೆಗಳು ಸಾವು ನೋವುಗಳು, ದಲಿತ ಮಹಿಳೆಯರ ಮೇಲಿನ ಅತ್ಯಾಚಾರಗಳು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ. ಇಲ್ಲಿನ ಮುಗ್ಧ ಮನಸ್ಸುಗಳಿಗೆ ಬೆಲೆ ಇಲ್ಲವೇ?

* ಉದ್ಯೋಗ ನೇಮಕಾತಿ ವಿಚಾರದಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ ಮಾತನಾಡಲು ನಿಮಗೆ ಮನಸ್ಸಿಲ್ಲವೇ? * ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ನಿವಾರಣೆಯಲ್ಲಿ 2 ಲಕ್ಷ 60 ಸಾವಿರ ಉದ್ಯೋಗ ಸೃಷ್ಟಿಯ ಅಗತ್ಯವಿದ್ದರೂ ನೀವು ಯಾಕೆ ಮಾತನಾಡುತ್ತಿಲ್ಲ?

* ತೈಲಬೆಲೆಯ ಜೊತೆಗೆ ದೇಶದ ಎಲ್ಲ ವಸ್ತುಗಳ ಬೆಲೆಗಳ ನಿರಂತರ ಹೆಚ್ಚಳದಲ್ಲಿ ನೀವೇಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ?

* ಧರ್ಮದ ನೆಪದಲ್ಲಿ, ಚಾತುರ್ವರ್ಣ್ಯದ ನೆಪದಲ್ಲಿ ಶತಮಾನಗಳಿಂದ ಸುಮಾರು ಶೇ. 95 ಜನರನ್ನು ವರ್ಣ, ವರ್ಗ, ಜಾತಿಗಳ ಆಧಾರದ ಮೇಲೆ ಶೋಷಣೆ ಮಾಡಿ ದಲಿತ, ಅಸ್ಪೃಶ್ಯರನ್ನು ಊರ ಹೊರಗಡೆ ಇಡಲಾಗಿದೆ. ಇದು ಜೀವ ವಿರೋಧಿ ಕೆಲಸವಲ್ಲವೇ?

* ಕಳೆದ ಹತ್ತು ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ದೇಶಕ್ಕೆ ಬಹಳ ಮುಖ್ಯವೆನಿಸುವ ಜಾತಿ-ಜನಗಣತಿ ಕಾರ್ಯವನ್ನು ಕೈಗೆತ್ತಿಕೊಂಡಿಲ್ಲ. ಇದರ ಹಿಂದಿನ ಮರ್ಮವನ್ನು ಎಲ್ಲರೂ ಅರಿಯಬೇಕಾದ ಅನಿವಾರ್ಯತೆ ಇದೆ. ಇದರ ಬಗ್ಗೆ ನೀವು ಏಕೆ ಮಾತನಾಡುತ್ತಿಲ್ಲ?

 ಈಗ ಹೇಳಿ ನೀವು ಬೇರೆಯವರು ತಿನ್ನುವ ಆಹಾರದ ಬಗ್ಗೆ ಗಂಭೀರವಾಗಿ ಮಾತನಾಡಬೇಕೋ ಅಥವಾ ದೇಶದಲ್ಲಿ ಈಗ ತಲೆದೋರಿರುವ ಗಂಭೀರ ಸಮಸ್ಯೆಗಳ ಬಗ್ಗೆ ತೊಡಗಿಸಿಕೊಳ್ಳಬೇಕೋ. ನೀವೇ ಯೋಚಿಸಿ.

share
ಧಮ್ಮಪ್ರಿಯ, ಬೆಂಗಳೂರು
ಧಮ್ಮಪ್ರಿಯ, ಬೆಂಗಳೂರು
Next Story
X