ಚೆನ್ನೈ ಬೀದಿಬದಿ ವ್ಯಾಪಾರಿಗಳಿಂದ ತರಕಾರಿ ಖರೀದಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Photo: Twitter/@nsitharamanoffc
ಚೆನ್ನೈ:ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಶನಿವಾರ ತಮಿಳುನಾಡಿನ ಚೆನ್ನೈನ (Chennai) ಮೈಲಾಪುರ ಪ್ರದೇಶದಲ್ಲಿ ಬೀದಿ ವ್ಯಾಪಾರಿಯಿಂದ ತರಕಾರಿಗಳನ್ನು(vegetable) ಖರೀದಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಚೆನ್ನೈ ಭೇಟಿಯ ವೇಳೆ ವಿತ್ತ ಸಚಿವೆ ನಿರ್ಮಾಲಾ ಅವರು ಮೈಲಾಪುರ ಮಾರುಕಟ್ಟೆಗೆ ತೆರಳಿದ್ದಲ್ಲದೆ ಕೆಲವು ಮಾರಾಟಗಾರರು, ಗ್ರಾಹಕರೊಂದಿಗೆ ಮಾತನಾಡಿದರು ಹಾಗೂ ತರಕಾರಿಯನ್ನು ಖರೀದಿಸಿದರು ಎಂದು ಅವರ ಕಚೇರಿಯ ಟ್ವೀಟ್ ತಿಳಿಸಿದೆ.
ವೀಡಿಯೋದಲ್ಲಿ ಅವರು ಕೆಲವು ಸಿಹಿ ಗೆಣಸುಗಳನ್ನು ಆಯ್ದುಕೊಳ್ಳುತ್ತಿರುವುದು ಕಂಡುಬಂತು.
ಭಾರತದಲ್ಲಿ ಹಣದುಬ್ಬರದಲ್ಲಿ ಒಳಪಟ್ಟಿರುವ ಪ್ರಮುಖ ವಸ್ತುಗಳಲ್ಲಿ ತರಕಾರಿ ಕೂಡ ಒಂದು. ಇದು ನಿರ್ಮಲಾ ಸೀತಾರಾಮನ್ ಅವರಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: 36 ವರ್ಷ ಸಂಕೋಲೆಯಿಂದ ಕಟ್ಟಿಹಾಕಿದ್ದ ಮಹಿಳೆಗೆ ಕೊನೆಗೂ ಬಂಧಮುಕ್ತಿ
Some glimpses from Smt @nsitharaman's visit to Mylapore market in Chennai. https://t.co/GQiPiC5ui5 pic.twitter.com/fjuNVhfY8e
— NSitharamanOffice (@nsitharamanoffc) October 8, 2022