ಮಂಗಳೂರು: MEIF ಶಿಕ್ಷಕರ ಕಾರ್ಯಾಗಾರದ ಸಮಾರೋಪ ಸಮಾರಂಭ

ಮಂಗಳೂರು: ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ ಅಡ್ಯಾರ್ ನಲ್ಲಿ ಮುಸ್ಲಿಂ ಎಜುಕೇಶನಲ್ ಇನ್ಸ್ಟಿಟ್ಯೂಷನ್ಸ್ ಫೆಡರೇಷನ್ (MEIF) ವತಿಯಿಂದ ಆಯೋಜಿಸಲಾಗಿದ್ದ 2 ದಿನಗಳ MEIF ಶಿಕ್ಷಕರ ಕಾರ್ಯಾಗಾರದ ಸಮಾರೋಪ ಸಮಾರಂಭವು ಶನಿವಾರ ನಡೆಯಿತು.
2ನೇ ದಿನದ ಕಾರ್ಯಾಗಾರವನ್ನು P.A ಕಾಲೇಜು ಮಂಗಳೂರು ಇದರ ಪ್ರಾಂಶುಪಾಲರಾದ ಡಾ. ಸರ್ಫರಾಝ್ ಜೆ ಹಾಸಿಮ್ ನಡೆಸಿಕೊಟ್ಟರು. 34 MEIF ವಿದ್ಯಾ ಸಂಸ್ಥೆಗಳ ಶಿಕ್ಷಕರು ಇದರ ಪ್ರಯೋಜನವನ್ನು ಪಡೆದರು.
ಪರಿಣಾಮಕಾರಿಯಾಗಿ ಈ ತರಬೇತಿ ನಡೆದಿದ್ದು, ಆಧುನಿಕ ವಿಧಾನವನ್ನು ಬಳಸಿಕೊಂಡು ಶಿಕ್ಷಣ ನೀಡುವ ಶೈಲಿಯನ್ನು ಡಾ. ಸರ್ಫರಾಝ್ ಜೆ ಹಾಸಿಮ್ ರವರು ವಿವರಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು MEIF ಅಧ್ಯಕ್ಷರಾದ ಮೂಸಬ್ಬ ಬ್ಯಾರಿ ವಹಿಸಿದರು. ಮುಖ್ಯ ಅತಿಥಿಯಾಗಿ ಎಸ್ಎಂ ಮುಸ್ತಫ (Managing Director New Bharath Infrastructure Co) ಭಾಗವಹಿಸಿ ಕಾರ್ಯಾಗಾರ ಆಯೋಜಿಸಿದ MEIF ಅನ್ನು ಪ್ರಶಂಸಿದರು.
ಕಾರ್ಯಕ್ರಮದ ಆರಂಭದಲ್ಲಿ MEIF ಉಪಾಧ್ಯಕ್ಷರಾದ ಮುಮ್ತಾಝ್ ಅಲಿ ಸ್ವಾಗತಿಸಿ, ಬರಕಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಬಲ್ಕೀಸ್ ಬೇಗಂ ವಂದಿಸಿದರು.
MEIF ಪ್ರ.ಕಾರ್ಯದರ್ಶಿಯಾದ B.A ನಝೀರ್, ಬರಕಾ ವಿದ್ಯಾ ಸಂಸ್ಥೆಯ ಆಡಳಿತ ನಿರ್ದೇಶಕರಾದ ನರ್ಗೀಸ್ ಅಶ್ರಫ್, ಆಡಳಿತ ಅಧಿಕಾರಿ ನೌಸ್ರೀನ್ , ಮ್ಯಾನೇಜರ್ ಸಮೀರ್, MEIF ಕಾರ್ಯಕಾರಿ ಸಮಿತಿ ಸದಸ್ಯರಾದ B.A ಇಕ್ಬಾಲ್, ನಿಸ್ಸಾರ್ ಫಕೀರ್ ಮೊಹಮ್ಮದ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು MEIF ಪ್ರೋಗ್ರಾಂ ಸೆಕ್ರೆಟರಿ ರಿಯಾಝ್ ಅಹ್ಮದ್ ನಿರೂಪಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಬರಕಾ ವಿದ್ಯಾ ಸಂಸ್ಥೆಯು ನಿರ್ವಹಿಸಿತು. ಎರಡು ದಿನಗಳ ಕಾರ್ಯಕ್ರಮವು ಯಸ್ವಿಯಾಗಿ ನಡೆಯಿತು.






.jpeg)
.jpeg)
.jpeg)

.jpeg)

.jpeg)


.jpeg)

.jpeg)


