ಚಿತ್ಪಾಡಿ ಪ್ಲಾಸ್ಟಿಕ್ ನಿರ್ವಹಣಾ ಘಟಕ ಉದ್ಘಾಟನೆ

ಉಡುಪಿ, ಅ.9: ಉಡುಪಿ ನಗರಸಭೆ ಮತ್ತು ಶ್ರೀಸಿದ್ಧಿನಗರ ಸ್ತ್ರೀಶಕ್ತಿ ಗುಂಪು ಉಡುಪಿ ಇವರ ಸಹಕಾರದೊಂದಿಗೆ ಚಿಟ್ಪಾಡಿ ಹನುಮಾನ್ ಗ್ಯಾರೇಜ್ ಬಳಿ ನಿರ್ಮಿಸಿರುವ ಪ್ಲಾಸ್ಟಿಕ್ ನಿರ್ವಹಣಾ ಘಟಕದ ಉದ್ಘಾಟನೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ರವಿವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸ್ಥಳೀಯ ನಗರಸಭಾ ಸದಸ್ಯ ಕೃಷ್ಣ ಕೊಡಂಚ, ಸಿದ್ಧಿನಗರ ಸ್ತ್ರೀಶಕ್ತಿ ಗುಂಪಿನ ಚಂದಾ, ನಗರ ಸಭೆಯ ಪರಿಸರ ಇಲಾಖೆಯ ಅಧಿಕಾರಿ ಸ್ನೇಹ, ಸಾಹಸ್ ವೇಸ್ಟ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮುಖ್ಯ ಅಧಿಕಾರಿ ಶೋಭಾ ರಾಘವೇಂದ್ರ, ಎಂ.ಆರ್.ಎಫ್ ನಿರ್ದೇಶಕ ಅರುಣ್ ಮೊದಲಾದ ವರು ಉಪಸ್ಥಿತರಿದ್ದರು.
Next Story





