ಕುಂತಳನಗರ: ಉದ್ಯೋಗ ಮೇಳದ ಸಮಾರೋಪ ಸಮಾರಂಭ

ಉಡುಪಿ, ಅ.9: ದೇಶದ ಅತೀ ದೊಡ್ಡ ಸಮಸ್ಯೆ ನಿರುದ್ಯೋಗ. ಕೊರೋನ ಕಾರಣದಿಂದ ಬಹಳಷ್ಟು ಜನ ಕೆಲಸ ಕಳೆದುಕೊಳ್ಳುವಂತಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಈ ಉದ್ಯೋಗ ಮೇಳದಿಂದ ಬಹಳಷ್ಟು ಗ್ರಾಮೀಣ ಪ್ರತಿಭೆಗಳಿಗೆ ಉದ್ಯೋಗ ದೊರಕುವಂತಾಗಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಗ್ರಾಮೀಣ ಬಂಟರ ಸಂಘದ ಸಭಾಭವನ ನಿರ್ಮಾಣ ಮತ್ತು ಅಭಿವೃದ್ಧಿ ಸಮಿತಿ, ಚಾರಿಟೇಬಲ್ ಟ್ರಸ್ಟ್ ಕುಂತಳ ನಗರ ಮಣಿಪುರ, ಉಡುಪಿ ಇವರ ಆಶ್ರಯದಲ್ಲಿ ರವಿವಾರ ಕುಂತಲ್ ನಗರದ ಕನ್ವೆನ್ಷನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳ ಲಾದ ಎರಡು ದಿನಗಳ ಉದ್ಯೋಗ ಮೇಳದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮ ಸಂಯೋಜಕ ಗುರುಪ್ರಶಾಂತ್ ಭಟ್ ಮಾತನಾಡಿ, ಉದ್ಯೋಗ ಮೇಳದಲ್ಲಿ ೨೫ ಕಂಪನಿಗಳು ಭಾಗವಹಿಸಿದ್ದು, ಶೇ.೪೦ರಷ್ಟು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅವರೆಲ್ಲರೂ ಗ್ರಾಮೀಣ ಬಂಟರ ಸಂಘದ ಸ್ಕಿಲ್ ಡೆವಲಪ್ಮೆಂಟ್ ಕಾರ್ಯಕ್ರಮ ದಡಿಯಲ್ಲಿ ತರಬೇತು ಹೊಂದಿದವ ರಾಗಿದ್ದಾರೆ ಎಂದು ತಿಳಿಸಿದರು.
ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಬಂಟರ ಸಂಘದ ಉಡುಪಿ ಅಧ್ಯಕ್ಷ ಜಯರಾಮ್ ಹೆಗಡೆ, ಮಣಿಪಾಲ ನಾಗೇಶ್ ಹೆಗ್ಡೆ, ಇಂದ್ರಾಳಿ ಜಯಕರ್ ಶೆಟ್ಟಿ, ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಕಿದಿಯೂರು, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅಂಡಾರು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಲ್ಯಾಡಿ ಸುರೇಶ್ ನಾಯಕ್, ದಿವ್ಯಾರಾಣಿ, ಪ್ರದೀಪ್ ವೇಣು ಜಯರಾಮ್, ಸಕರಾಂ ಶೆಟ್ಟಿ, ದೆಂದೂರುಕಟ್ಟೆ ಸುರೇಶ್ ಶೆಟ್ಟಿ, ತೋನ್ಸೆ ಮನೋಹರ್ ಶೆಟ್ಟಿ, ಡಾ.ಎಚ್.ಬಿ.ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ಕಾರ್ತಿಕ್ ಶೆಟ್ಟಿ, ವಿಜಿತ್ ಶೆಟ್ಟಿ, ರಮೇಶ್ ಶೆಟ್ಟಿ, ಪದ್ಮನಾಭ ಹೆಗಡೆ ರಜನಿ ಶೆಟ್ಟಿ ಪ್ರದೀಪ್ ಶೆಟ್ಟಿ ದಯಾನಂದ್ ಶೆಟ್ಟಿ, ಹರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.







