ಲಾಲು ಪ್ರಸಾದ್ ಯಾದವ್ ಆರ್‌ಜೆಡಿ ಅಧ್ಯಕ್ಷರಾಗಿ 12ನೇ ಬಾರಿಗೆ ಆಯ್ಕೆ

ಹೊಸದಿಲ್ಲಿ,ಅ.9: ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ಜೆಡಿ ಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರು ರವಿವಾರ ದಾಖಲೆಯ 12ನೇ ಬಾರಿಗೆ ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಹುದ್ದೆಗೆ ಯಾದವ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ದಿಲ್ಲಿಯಲ್ಲಿ ನಡೆಯುತ್ತಿರುವ ಪಕ್ಷದ ರಾಷ್ಟ್ರೀಯ ಸಮ್ಮೇಳನದಲ್ಲಿ ಯಾದವ್ ಆಯ್ಕೆಯನ್ನು ಘೋಷಿಸಲಾಯಿತು.ಅವರು ಮೂತ್ರಪಿಂಡ ಕಸಿಗಾಗಿ ಅ.10ರಂದು ಸಿಂಗಾಪುರಕ್ಕೆ ತೆರಳಲಿದ್ದಾರೆ.
Next Story





