ಅಲ್ ಅಝ್ಹರಿಯ್ಯ ಅಸೋಸಿಯೇಶನ್‌ನಿಂದ ಮೀಲಾದುನ್ನಬಿ ಆಚರಣೆ
ಮಂಗಳೂರು, ಅ.9: ನಗರದ ಬಂದರ್‌ನಲ್ಲಿರುವ ಅಲ್‌ಅಝ್ಹರಿಯ್ಯ ಅಸೋಸಿಯೇಶನ್‌ನ ದರ್ಸ್ ವಿದ್ಯಾರ್ಥಿ ಗಳಿಂದ ಪ್ರವಾದಿ ಮುಹಮ್ಮದ್ (ಸ)ರವರ ಜನ್ಮದಿನದ ಪ್ರಯುಕ್ತ ಅಲ್‌ಅಝ್‌ಹರಿಯ್ಯ ದರ್ಸ್ ಸಭಾಂಗಣದಲ್ಲಿ ಮೀಲಾದುನ್ನಬಿ ಕಾರ್ಯಕ್ರಮ ಶನಿವಾರ ನಡೆಯಿತು.
ಮುದರ್ರಿಸ್ ಅಲ್ಹಾಜ್ ಹೈದರ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಕಂದಕ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಶೇಖ್ ಅಬ್ದುಲ್ಲ ಬಾಖವಿ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿ ಮುಹಮ್ಮದ್ ಹನೀಫ್ ಸ್ವಾಗತಿಸಿ ದರು. ಸಹ ಮುದರ್ರಿಸ್ ಹಾಫಿಳ್ ಅಬೂಬಕ್ಕರ್ ಮದನಿ, ಸದರ್ ಮುಅಲ್ಲಿಮರಾದ ಬಶೀರ್ ಮದನಿ, ಯಹ್ಯಾ ಮದನಿ, ಅಲ್‌ಅಝ್ಹರಿಯ್ಯ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಆಡಳಿತ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್ ಹಾಜಿ, ಫಝಲ್ ಹಾಜಿ, ರಿಯಾಝುದ್ದೀನ್ ಹಾಜಿ ಮತ್ತಿತರು ಉಪಸ್ಥಿತರಿದ್ದರು.
Next Story