ಕಾಪು : ಗಿಡ ನೆಟ್ಟು ರಬೀವುಲ್ ಅವ್ವಲ್ ದಿನ ಆಚರಣೆ

ಕಾಪು : ರಬಿವುಲ್ ಅವ್ವಲ್‍ನ 12ನೇ ದಿವಸ ವಿಶೇಷವಾಗಿ ಕಾಪು ವರ್ತುಲದ ಎಸ್‍ಐಓ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ತಮ್ಮ ಬಳಗದ ವಿದ್ಯಾರ್ಥಿಗಳು ಮತ್ತು ಬಂಧುಗಳೊಂದಿಗೆ ಪರಿಸರದಲ್ಲಿ ಹಸಿರು ಬೆಳೆಸುವ ನಿಟ್ಟಿನಲ್ಲಿ ಮಲ್ಲಾರ್ ವ್ಯಾಪ್ತಿಯಲ್ಲಿ ಹಲವು ಗಿಡಗಳನ್ನು ನೆಡಲಾಯಿತು.
ನಾಳೆ ಪ್ರಳಯ ಬರುತ್ತದೆ ಎಂದು ಗೊತ್ತಿದ್ದರೂ ಇಂದು ಒಂದು ಗಿಡವನ್ನು ನೆಡಿರಿ ಎಂದು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈವಸ್ಸಲಾಮ್ ತಿಳಿಸಿದ ಪ್ರಕಾರ ಈ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಇದೇ ವೇಳೆ ಮನುಷ್ಯನು ಮೃತಗೊಂಡ ನಂತರ ಮಯ್ಯತ್ ಸಂಸ್ಕರಣೆ ಮಾಡುವ ತರಬೇತಿ ಶಿಬಿರವನ್ನು ತೌಹೀದ್ ಮಂಝಿಲ್ ವಠಾರದಲ್ಲಿ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮುಹಮ್ಮದ್ ಹನೀಫ್ ಜಾಫರ್ ರವರು, ಯಾಸೀನ್ ಮನ್ನಾ ಉಡುಪಿ ಭಾಗವಹಿಸಿದ್ದರು. ಕಾರ್ಯಕ್ರಮದ ಮಹತ್ವವನ್ನು ಜಮಾ ಅತೆ ಇಸ್ಲಾಮಿ ಹಿಂದ್ ನ ಸ್ಥಾನೀಯ ಅಧ್ಯಕ್ಷರು ಅನ್ವರ್ ಅಲಿ ಕಾಪು ಶಿಬಿರಾರ್ಥಿಗಳಿಗೆ ವಿವರಿಸಿದರು.
ಎಸ್‍ಐಓ ನ ಅಧ್ಯಕ್ಷ ಅನೀಸ್ ಅಲಿ ಅತಿಥಿಗಳನ್ನು ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ನೀಡಿದರು. ಕಾರ್ಯಕ್ರಮ ದಲ್ಲಿ ಮುಹಮ್ಮದ್ ಇಕ್ಬಾಲ್ ಸಾಹೇಬ್, ಮುಹಮ್ಮದ್ ಹಾಶಿಮ್ ಸಾಹೇಬ್, ಮುಹಮ್ಮದ್ ಅಲಿ, ಮುಹಮ್ಮದ್ ಅವೀಜ್, ಅಬ್ದುಲ್ ಖಾಲಿದ್, ಮುಹಮ್ಮದ್ ಸೈಫ್, ಅಕ್ಬರ್, ಸಕ್ಲೇನ್ ಪಾಷ , ಅಬ್ದುಲ್ ಅಹದ್ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.







