ಪ್ರೊ.ಇಂದಿರಾ ಕಿದಿಯೂರು ನಿಧನ

ಉಡುಪಿ, ಅ.9: ಅಥ೯ಶಾಸ್ತ್ರ, ರಾಜಕೀಯ ಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಸುಮಾರು ಮೂರು ದಶಕಗಳಿಗೂ ಅಧಿಕ ಅಧ್ಯಾಪನ ಅನುಭವ ಹೊಂದಿರುವ ಪ್ರೊ.ಇಂದಿರಾ ಕಿದಿಯೂರು ಇಂದು ನಿಧನರಾದರು. ಅವರಿಗೆ 84 ವರ್ಷ ಪ್ರಾಯ ವಾಗಿತ್ತು.
ಉಡುಪಿ ಎಂಜಿಎಂ ಕಾಲೇಜಿ ನಲ್ಲಿ ಉಪನ್ಯಾಸಕ ವೃತ್ತಿ ಪ್ರಾರಂಭಿಸಿ ಹಲವು ವರುಷಗಳ ಕಾಲ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಿದ್ಯಾರ್ಥಿಗಳ ಪಾಲಿಗೆ ಪ್ರೊ. ಇಂದಿರಾ ಮೇಡಂ ನಿಜವಾದ ಅಥ೯ದಲ್ಲಿ ಮಾತೃ ಹೃದಯದ ವಾತ್ಸಲ್ಯ ಮೂತಿ೯ಯಾಗಿದ್ದರು.
ಪ್ರೊ.ಇಂದಿರಾ ರವರ ಅಚ್ಚುಮೆಚ್ಚಿನ ವಿಷಯ ಅಥ೯ ಶಾಸ್ತ್ರವಾಗಿತ್ತು. ಮುಂಬೈ ವಿ.ವಿ.ಯಲ್ಲಿ ಅಥ೯ ಶಾಸ್ತ್ರ ಅಧ್ಯಯನ ಮಾಡುವಾಗ ಶ್ರೇಷ್ಠ ಅಥ೯ ಶಾಸ್ತ್ರಜ್ಞ ಪ್ರೊ.ಬ್ರಹ್ಮಾನಂದ ಅವರ ಗುರುಗಳಾಗಿದ್ದರು ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತಿದ್ದರು. ಹೀಗಾಗಿ ಹಲವು ವಿದ್ಯಾರ್ಥಿಗಳಿಗೆ ಅವರು ಅಕೌಂಟೆನ್ಸಿ ಹಾಗೂ ಸಂಖ್ಯಾಶಾಸ್ತ್ರ ವಿಷಯ ಗಳಲ್ಲಿ ಪಾಠ ಹೇಳಿಕೊಡುತಿದ್ದರು.
ಪ್ರೊ. ಇಂದಿರಾ ಅವರು ಪತಿ ಎಂ.ಜಿಎಂ.ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದ ಪ್ರೊ.ರಮೇಶ್ ಕಿದಿಯೂರು, ಓವ೯ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.







