ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಮಿಲಾದುನ್ನಬಿ ಆಚರಣೆ

ಆತೂರು: ಬದ್ರಿಯಾ ಜುಮಾ ಮಸೀದಿ ಆತೂರು ಇದರ ವತಿಯಿಂದ ಮಿಲಾದುನ್ನಬಿ ಪ್ರಯುಕ್ತ ಕಾರ್ಯಕ್ರಮ ಆತೂರು ಸುಲ್ತಾನುಲ್ ಹಿಂದ್ ವೇದಿಕೆಯಲ್ಲಿ ನಡೆಯಿತು.
ಸಮಾರಂಭ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಎಚ್. ಅಹ್ಮದ್ ಕುಂಞಿ ವಹಿಸಿದ್ದರು. ಉದ್ಘಾಟನೆಯನ್ನು ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಫೈಝಿ ಮಾಡಿದರು. ಕೆ ಎಂ ಸಿದ್ದಿಕ್ ಫೈಝಿ ಸಂದೇಶ ಭಾಷಣ ಮಾಡಿದರು. ಹಂಝ ಸಖಾಫಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಶಂಶುದ್ದಿನ್ ಹುದವಿ, ಇಸ್ಮಾಯಿಲ್ ದಾರಿಮಿ, ಶರೀಫ್ ಆರ್ಶದಿ, ಅಬ್ದುಲ್ಲ ಮುಸ್ಲಿಯಾರ್, ಜಮಾಅತ್ ಕಾರ್ಯದರ್ಶಿ ಸಿರಾಜ್ ಬಡ್ಡಮೆ, ಬದ್ರಿಯಾ ಇಂಗ್ಲಿಷ್ ಮೀಡಿಯಂ ಶಾಲೆಯ ಸಂಚಾಲಕರಾದ ಆದಂ ಹಾಜಿ ಪಿಲಿಕುಡೆಲು, ಕಾರ್ಯದರ್ಶಿ ಯಹ್ಯಾ ಎಲ್ಯಂಗ, ಪೊಡಿಕುಂಞಿ ನೀರಾಜೆ, ಸಿದ್ದೀಕ್. ಎನ್, ಕೆ.ಸುಲೈಮಾನ್, ಬಿ. ಅರ್.ಅಬ್ದುಲ್ ಖಾದರ್, ಎ.ಕೆ.ಬಶೀರ್, ನಝಿರ್ ಕೊಯಿಲ, ಬಿ ಕೆ ಅಬ್ದುಲ್ ರಝಕ್, ಆಡಳಿತ ಸಮಿತಿ ಸದಸ್ಯರು, ಜಮಾಹತರು, ಉಪಸ್ಥಿತರಿದ್ದರು.
ಅಬ್ದುಲ್ಲ ಮುಸ್ಲಿಯಾರ್ ರವರ ಮುಖಾಂ ಝಿಯಾರತ್ ನೊಂದಿಗೆ ರ‌್ಯಾಲಿಗೆ ಚಾಲನೆ ನೀಡಲಾಯಿತು. ರ‌್ಯಾಲಿ ಬದ್ರಿಯಾ ಜುಮಾ ಮಸೀದಿ ಯಿಂದ ಹೊರಟು ಮುಹಿಯ್ಯುದ್ದಿನ್ ಜುಮಾ ಮಸೀದಿಗೆ ಸಾಗಿ ಗೋಳಿತ್ತಾಡಿಗೆ ಸಾಗಿ ನಂತರ ಬದ್ರಿಯಾ ಜುಮಾ ಮಸೀದಿ ಸಂಪನಗೊಂದಿತ್ತು. ಖಾದರ್ ಬಿ ಎಸ್ ಸ್ವಾಗತ ಮಾಡಿದರು. ರಫೀಕ್ ಜಿ ನಿರೂಪಿಸಿದರು.