ಉಳ್ಳಾಲ: ಇಲ್ಯಾಸ್ ಜುಮಾ ಮಸೀದಿಯಲ್ಲಿ ಮಿಲಾದುನ್ನಬಿ ಕಾರ್ಯಕ್ರಮ

ಉಳ್ಳಾಲ: ಇಲ್ಯಾಸ್ ಜುಮಾ ಮಸೀದಿ ಹಾಗೂ ರಿಫಾಯಿಯ್ಯ ಮದ್ರಸ ಕಲ್ಕಟ್ಟ ಇದರ ಆಶ್ರಯದಲ್ಲಿ ಮಿಲಾದುನ್ನಬಿ ಕಾರ್ಯಕ್ರಮ ಕಲ್ಕಟ್ಟ ದಲ್ಲಿ ನಡೆಯಿತು.
ಮಸೀದಿ ಅಧ್ಯಕ್ಷ ಮನ್ಸೂರ್ ಧ್ವಜಾರೋಹಣ ನೆರವೇರಿಸಿದರು.
ಕಲ್ಕಟ್ಟ ಮಸೀದಿ ಖತೀಬ್ ಇಸ್ಹಾಖ್ ಸಖಾಫಿ ದುಆ ನೆರವೇರಿಸಿ ಪ್ರವಾದಿಯವರ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ರಿಫಾಯಿಯ್ಯ ಮದ್ರಸ ಸದ್ ರ್ ಶರೀಫ್ ಸಅದಿ, ಮುಅಲ್ಲಿಂಗಳಾದ ಹಸನ್ ಸ ಅದಿ, ಇಸ್ಹಾಕ್ ಸಅದಿ, ಅಬ್ದುಲ್ ರಝಾಕ್ ಸಅದಿ, ಮುಹಮ್ಮದ್ ಮದನಿ ಮತ್ತಿತರರು ಉಪಸ್ಥಿತರಿದ್ದರು
Next Story





