ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

ಕುಂದಾಪುರ, ಅ.11: ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ಮಹಾಸಭೆ ಹಾಗೂ ನೂತನ ಸಮಿತಿಯ ಆಯ್ಕೆಯು ಮಾಬುಕಳದ ಸಾಗರ್ ಫ್ಲಾಝಾ ಹಾಲ್‌ನಲ್ಲಿ ಇತ್ತೀಚೆಗೆ ಜರುಗಿತು.
ಜಿಲ್ಲಾ ಸಮಿತಿಯ ಅಧ್ಯಕ್ಷ ಮುಹಮ್ಮದ್ ರಫೀಕ್ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಅಸ್ಸೈಯದ್ ಜಾಫರ್ ಅಸ್ಸಖಾಫ್ ತಂಙಳ್ ಕೊಟೇಶ್ವರ ದುಆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಮೂಳೂರ್ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು.
ಮೂಳೂರು ಸುನ್ನಿ ಸೆಂಟರ್ನ ಯು.ಕೆ.ಮುಸ್ತಫಾ ಸಅದಿ, ಮೂಳೂರ್ ಎಸ್‌ವೈಎಸ್ ಜಿಲ್ಲಾಧ್ಯಕ್ಷ ಹಂಝತ್ ಹೆಜಮಾಡಿ, ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಮುತ್ತಾಲಿ ವಂಡ್ಸೆ, ಸುನ್ನಿ ದಾವತೇ ಇಸ್ಲಾಮಿ ಉಡುಪಿ ಜಿಲ್ಲಾ ಉಸ್ತುವಾರಿ ಸೈಯದ್ ಫರೀದ್ ಸಾಹೇಬ್, ಪಿ.ಬಿ.ಅಹ್ಮದ್ ಕಾಸಿಮಿ ಕಾಪು, ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯ ಅಬ್ದುರ್ರಹಮಾನ್ ರಝ್ವಿ ಕಲ್ಕಟ್ಟ, ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಕಾರ್ಯಾಧ್ಯಕ್ಷ ಸುಬ್ಹಾನ್ ಅಹ್ಮದ್ ಹೊನ್ನಾಳ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಪ್ರತಿನಿಧಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಜಿಲ್ಲಾಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಕುಂದಾಪುರ, ಪ್ರಧಾನ ಕಾರ್ಯದರ್ಶಿಯಾಗಿ ಸುಭಾನ್ ಅಹ್ಮದ್ ಹೊನ್ನಾಳ, ಕೋಶಾಧಿಕಾರಿಯಾಗಿ ಮುಹಮ್ಮದ್ ಗೌಸ್ ಕಾರ್ಕಳ, ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ಇಕ್ಬಾಲ್ ಜನ್ಸಾಲೆ, ಕಾರ್ಯಾಧ್ಯಕ್ಷರಾಗಿ ಇಬ್ರಾಹೀಂ ಮಟಪಾಡಿ, ಉಪಾಧ್ಯಕ್ಷರುಗಳಾಗಿ ಅಸ್ಸೈಯದ್ ಜಾಫರ್ ಅಸ್ಸಖಾಪ್ ತಂಙಳ್ ಕೋಟೇಶ್ವರ, ಮುಸ್ತಫ ಸಅದಿ ಮೂಳೂರ್, ಮುಹಮ್ಮದ್ ನಯೀಮ್ ಕಟಪಾಡಿ, ಬಶೀರ್ ಅಲಿ ಮೂಳೂರು, ನಾಸಿರ್ ಶೇಕ್ ಕಾರ್ಕಳ, ಅಬ್ದುಲ್ ಹಮೀದ್ ಮೂಳೂರ್, ಮನ್ಸೂರ್ ಮರವಂತೆ, ಅಬೂ ಮುಹಮ್ಮದ್ ಕುಂದಾಪುರ, ಕಾರ್ಯದರ್ಶಿಗಳಾಗಿ ಅಶ್ರಫ್ ಗರ್ಮಾ ಹೂಡೆ, ಮನ್ಸೂರ್ ಉಡುಪಿ, ಇಲ್ಯಾಸ್ ಕಟಪಾಡಿ, ಇಲ್ಯಾಸ್ ನಾವುಂದ, ಉಮರುಲ್ ಫಾರೂಕ್ ರಂಗನಕೆರೆ, ಸುಲೈಮಾನ್ ಬಜಗೊಳಿ, ಮುಹಮ್ಮದ್ ಸುಲ್ತಾನ್ ಬೈಂದೂರು, ಕಾನೂನು ಸಲಹೆಗಾರರಾಗಿ ಹಂಝತ್ ಅಡ್ವೊಕೇಟ್ ಹೆಜಮಾಡಿ, ಸದಸ್ಯರುಗಳಾಗಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಅಬ್ದುರ್ರಶೀದ್ ಸಖಾಫಿ ಮಜೂರು, ಕೊಂಬಾಳಿ ಹನೀಫ್ ಝಹ್ರೀ ನಾವುಂದ, ಸೈಯದ್ ಫರೀದ್ ಸಾಹಬ್ ಉಡುಪಿ, ಮೊಹಿಯುದ್ದಿನ್ ಕಟಪಾಡಿ, ಅಬ್ದುಲ್ಲತೀಫ್ ಸಾಣೂರ್, ರಹೀಂ ಕಾರ್ಕಳ, ಮುಹಮ್ಮದ್ ಮುಸ್ತಫ ಬಡಾಕೆರೆ, ಮುಹಮ್ಮದ್ ಅಲ್ತಾಫ್ ಮಟಪಾಡಿ, ವಸೀಂ ಬಾಷಾ ಕುಂದಾಪುರ, ಮುಹಿಯುದ್ದೀನ್ ಕಾಪು, ಅಕ್ಬರ್ ಬಾಷಾ ಬ್ರಹ್ಮಾವರ, ನಾಸಿರ್ ಮೂಡುಗೊಪಾಡಿ, ಶಾಬಾನ್ ಹಂಗಳೂರು, ಮುಹಮ್ಮದ್ ಮೂಳೂರ್ ಅವರನ್ನು ಆಯ್ಕೆ ಮಾಡಲಾಯಿತು.







