ಉಕ್ರೇನ್ ಕುರಿತು ವಿಶ್ವಸಂಸ್ಥೆಯಲ್ಲಿ ರಹಸ್ಯ ಮತದಾನಕ್ಕೆ ರಶ್ಯಾದ ಬೇಡಿಕೆ ತಿರಸ್ಕರಿಸಿದ ಭಾರತ

Photo: Twitter
ಹೊಸದಿಲ್ಲಿ: ಉಕ್ರೇನ್ನ ನಾಲ್ಕು ಪ್ರದೇಶಗಳನ್ನು ಮಾಸ್ಕೋ "ಅಕ್ರಮ ಸ್ವಾಧೀನ" ವನ್ನು ಖಂಡಿಸುವ ಕರಡು ನಿರ್ಣಯದ ಮೇಲೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಹಸ್ಯ ಮತದಾನವನ್ನು ಕೈಗೊಳ್ಳಲು ರಶ್ಯ ಮಾಡಿದ ಬೇಡಿಕೆಯ ವಿರುದ್ದವಾಗಿ ಭಾರತ ಸೋಮವಾರ ಮತ ಚಲಾಯಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಭಾರತವು ಇತರ 106 ದೇಶಗಳೊಂದಿಗೆ ಗುಪ್ತ ಮತದಾನ ನಡೆಸಬೇಕೆಂಬ ರಷ್ಯಾದ ಬೇಡಿಕೆಯನ್ನು ವಿರೋಧಿಸಿತು. ರಹಸ್ಯ ಮತದಾನವನ್ನು ನಡೆಸಲು ರಷ್ಯಾ ನೀಡಿದ ಕರೆಯ ಪರವಾಗಿ ಹದಿಮೂರು ದೇಶಗಳು ಮತ ಚಲಾಯಿಸಿದವು. ರಷ್ಯಾ ಹಾಗೂ ಚೀನಾ ಸೇರಿದಂತೆ ಇನ್ನೂ 39 ದೇಶಗಳು ಮತದಾನದಿಂದ ದೂರ ಉಳಿದಿವೆ.
ಉಕ್ರೇನ್ನ ನಾಲ್ಕು ಪ್ರದೇಶಗಳ 'ಅಕ್ರಮ ಸ್ವಾಧೀನ'ವನ್ನು ಖಂಡಿಸುವ ಕರಡು ನಿರ್ಣಯದ ಮೇಲೆ ಮಾಸ್ಕೋ ರಹಸ್ಯ ಮತದಾನವನ್ನು ಕೋರಿತ್ತು.
Next Story